ಗೋಕರ್ಣದ ಕರಿಯಪ್ಪನ ಕಟ್ಟೆ ಕಡಲತೀರದ ಬಳಿ ಅಡ್ಡಾದಿಡ್ಡಿ ಅಲೆದಾಡುತ್ತಿದ್ದವರನ್ನು ಪೊಲೀಸರು ವಿಚಾರಿಸಿದ್ದಾರೆ. ಆಗ ಅವರಿಬ್ಬರು ಮಾದಕ ವ್ಯಸನ ಸೇವಿಸಿದ್ದು ದೃಢವಾಗಿದೆ.
Advertisement. Scroll to continue reading.
ಬೆಂಗಳೂರಿನ ಐ ಟಿ ಉದ್ಯೋಗಿ ಪವನ್ ಮಧುಜಯರಾಮ (28) ಹಾಗೂ ರಾಘು ಸೆಲ್ವರಾಜನ್ (30) ಅವರು ಗೋಕರ್ಣಕ್ಕೆ ಬಂದು ಗಾಂಜಾ ಸೇದಿದ್ದಾರೆ. ಗಾಂಜಾ ನಶೆಯಲ್ಲಿದ್ದ ಅವರಿಬ್ಬರು ಎಲ್ಲೆಂದರಲ್ಲಿ ಅಲೆದಾಟ ನಡೆಸಿದ್ದು, ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ಜೊತೆಗೆ ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯವಾಗಿಯೂ ಮಾತನಾಡಿದ್ದಾರೆ. ಪೊಲೀಸರು ಅವರಿಬ್ಬರ ಬಳಿ ತೆರಳಿ ವಿಚಾರಿಸಿದ್ದಾರೆ. ಆಗಲೂ, ಅವರಿಬ್ಬರು ನಶೆಯ ಗುಂಗಿನಲ್ಲಿರುವುದು ಗೊತ್ತಾಗಿದೆ. ಹೀಗಾಗಿ ಪೊಲೀಸರು ಅವರಿಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ತಪಾಸಣೆಯಲ್ಲಿ ಅವರಿಬ್ಬರು ಗಾಂಜಾ ಸೇವಿಸಿದ್ದು ದೃಢವಾಗಿದೆ. ನಿಷೇಧಿತ ಗಾಂಜಾ ಸೇವಿಸಿ ಅಲೆದಾಡುತ್ತಿದ್ದ ಐಟಿ ಉದ್ಯೋಗಿಗಳಿಬ್ಬರಿಗೂ ಪೊಲೀಸರು ಕಾನೂನು ಪಾಠ ಮಾಡಿದ್ದಾರೆ.
ಪವನ್ ಮಧುಜಯರಾಮ ಹಾಗೂ ರಾಘು ಸೆಲ್ವರಾಜನ್ ಅವರ ನಶೆ ಇಳಿಸಿದ ಪೊಲೀಸರು ಇಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದಾರೆ. ಅದಾದ ನಂತರ ಮೇಲಧಿಕಾರಿಗಳಿಗೂ ಈ ವಿಷಯ ಮುಟ್ಟಿಸಿದ್ದಾರೆ. ಪೊಲೀಸರಿಗೆ ಸಿಕ್ಕಿ ಬಿದ್ದವರಾಗಿದ್ದು,ಇವರು ಕಡಲ ತಟದಲ್ಲಿ ಅನುಮಾನಾಸ್ಪದವಾಗಿ ಅತ್ತಿತ್ತ ಓಡಾಡುತ್ತಿರುವಾಗ ಗಮನಿಸಿದ ಪೊಲೀಸರ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಒಳಪಡಿಸಿದಾಗ ಮಾದಕ ಪದಾರ್ಥ ಸೇವಿಸಿದ್ದು, ಧೃಡಪಟ್ಟಿದ್ದು,ಈ ಕುರಿತು ಪಿ.ಐ. ಶ್ರೀಧರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
`ಮಾದಕ ವ್ಯಸನ ಜೀವನಕ್ಕೆ ಮಾರಕ’