ಶಿರಸಿ ಜಾತ್ರೆಗೆ ಬುರ್ಕಾ ಧರಿಸಿ ಬಂದಿದ್ದವರ ವಿಡಿಯೋ ಮಾಡಿದ ಅಮೋಘ ಭಟ್ಟ ಅವರು `ಇದು ದುಬೈ ಜಾತ್ರೆ’ ಎಂದು ವಿಡಿಯೋ ಹರಿಬಿಟ್ಟು ಇದನ್ನು `ದುಬೈ ಜಾತ್ರೆ’ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಮುಸ್ಲಿಂ ಸಮುದಾಯದವರಿಂದ ಆಕ್ರೋಶವ್ಯಕ್ತವಾಗಿದ್ದು ಅಮೋಘ ಭಟ್ಟ ಅವರ ವಿರುದ್ಧ ಕಾನೂನು ಕ್ರಮವಾಗಿದೆ.
ಶಿರಸಿ ಜಾತ್ರೆಗೆ ಎಲ್ಲಾ ಸಮುದಾಯದವರು ಆಗಮಿಸಿದ್ದು, ಅತ್ಯಂತ ಖುಷಿಯಿಂದ ಜಾತ್ರೆ ಪೇಟೆ ತಿರುಗಾಡಿದ್ದಾರೆ. ಹೀಗಿರುವಾಗ ಅಮೋಘ ಭಟ್ಟ ಅವರು ಶಿರಸಿ ಜಾತ್ರೆಗೆ ಬುರ್ಕಾ ಧರಿಸಿ ಬಂದ ಮಹಿಳೆಯರನ್ನು ಮಾತ್ರ ಗುರಿಯಾಗಿರಿಸಿಕೊಂಡು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಅದಾದ ನಂತರ `ಇದು ಶಿರಸಿ ಜಾತ್ರೆಯಲ್ಲ. ದುಬೈ ಜಾತ್ರೆ’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಅನೇಕರು ಅದಕ್ಕೆ ವಿವಿಧ ರೀತಿ ಕಮೆಂಟ್ ಮಾಡಿದ್ದಾರೆ.
ಮುಸ್ಲಿಂ ಸಮುದಾಯದವರು ಸಹ ಈ ಬಗ್ಗೆ ಪ್ರತಿಭಟನೆ ನಡೆಸಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮುದಾಯವೊಂದನ್ನು ಉದ್ದೇಶಿಸಿ ಕೆಟ್ಟದಾಗಿ ಬಿಂಬಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಚೋದನಾಕಾರಿ ಸಂದೇಶ ರವಾನಿಸಿದವರ ವಿರುದ್ಧವೂ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಎಲ್ಲದರ ನಡುವೆ ಪೊಲೀಸ್ ಸಿಬ್ಬಂದಿ ಹನುಮಂತಪ್ಪ ಕಪಾಡಿ ಅವರು ಆ ವಿಡಿಯೋ ನೋಡಿದ್ದು, ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಕೋಮು ಸೌಹಾರ್ದತೆಗೆ ದಕ್ಕೆ ಬರುವ ನಿಟ್ಟಿನಲ್ಲಿ ವಿಡಿಯೋ ಇದ್ದ ಕಾರಣ ಅಮೋಘ ಭಟ್ಟ ಅವರ ಜೊತೆ ಇನ್ನಿತರರ ಜನರ ಮೇಲೆಯೂ ಪ್ರಕರಣ ದಾಖಲಾಗಿದೆ. ವಸಂತ ಮರಾಠಿ, ಅಪ್ಪು ನಾಯರ್, ಶ್ವೇತಾ, ಪವನ್ ಚಿನ್ನಿ, ಪ್ರೇಮಕುಮಾರ ದೇವಾಡಿಗ, ಶೈಲೇಶ ನಾಯ್ಕ, ಪೂಜಾ ಶಿರಸಿ, ಯೋಗೇಶ ಯೋಗಿ ಎಂಬಾತ ಜಾಲತಾಣಗಳ ಮೂಲಕವೂ ಈ ವಿಡಿಯೋ ಹರಿದಾಡಿದೆ. ಈ ಹಿನ್ನೆಲೆ ಆ ಎಲ್ಲಾ ಪ್ರೊಪೈಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.