ಕಾರವಾರದ ಕಿನ್ನರ ಹೈಸ್ಕೂಲಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ಅವರು ಪೆನ್ನುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆ ಪೆನ್ನುಗಳ ಮೂಲಕ ಪರೀಕ್ಷೆ ಎದುರಿಸಿ ಸಾಧನೆ ಮಾಡಿ ಎಂದವರು ಕರೆ ನೀಡಿದ್ದಾರೆ.
Advertisement. Scroll to continue reading.
`ಪ್ರಶಾಂತ ಗೋವೇಕರ್ ಅವರು ತಾಲೂಕು ಪಂಚಾಯತ ಸದಸ್ಯರಾಗಿದ್ದ ಅವಧಿಯಲ್ಲಿಯೂ ಶೈಕ್ಷಣಿಕ ಸೇವೆ ಮಾಡಿದ್ದಾರೆ. ಸೋರುತ್ತಿರುವ ಕಟ್ಟಡವನ್ನು ಅವರು ದುರಸ್ಥಿ ಮಾಡಿಸಿಕೊಟ್ಟಿದ್ದಾರೆ’ ಎಂದು ಶಿಕ್ಷಕ ಹನುಮಂತಪ್ಪ ಎಸ್ ಅವರು ಹೇಳಿದರು. ಹೈಸ್ಕೂಲ್ ಸೋರುತ್ತಿದ್ದಾಗ ಅದಕ್ಕೆ ತಾಲೂಕು ಪಂಚಾಯತ ಅನುದಾನದಿಂದ ಶೀಟ್ ಅಳವಡಿಸಿದ್ದರಿಂದ ಎಲ್ಲರಿಗೂ ಅನುಕೂಲವಾಗಿದೆ’ ಎಂದವರು ಸ್ಮರಿಸಿದರು.
ಈ ವೇಳೆ ಮಾತನಾಡಿದ ಪ್ರಶಾಂತ ಗೋವೇಕರ್ ಅವರು `ಎಲ್ಲಾ ಮಕ್ಕಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು’ ಎಂದು ಕರೆ ನೀಡಿದರು. ಪ್ರಮುಖರಾದ ಎಸ್ ವಿ ನಾಯ್ಕ ರಾಣೆ, ಎಸ್ ಟಿ ಲಮಾಣಿ, ಎಂ ಎನ್ ನಾಯಕ, ಎಚ್ ಕೆ ಪ್ರವೀಣ, ವಿ ಎಂ ಇಡೂರಕರ್, ಪಿ ಎ ಕೋಚ್ರೇಕರ್ ಇತರರಿದ್ದರು. 29 ಮಕ್ಕಳಿಗೆ ಅಗತ್ಯ ಪೆನ್ನುಗಳನ್ನು ಅವರು ವಿತರಿಸಿದರು.