ಗೋಕರ್ಣ ಬಸ್ ನಿಲ್ದಾಣದ ಆವಾರದಲ್ಲಿರುವ ಎರಡು ಅಂಗಡಿಗಳ ಮೇಲೆ ಕಳ್ಳರು ಕಣ್ಣು ಹಾಕಿದ್ದಾರೆ. ಬಾಗಿಲು ಹಾಕಿದ್ದ ಅಂಗಡಿಯ ಬೀಗ ಮುರಿದ ಕಳ್ಳರು ಅಲ್ಲಿದ್ದ ತರಕಾರಿ ಕದ್ದಿದ್ದಾರೆ!
ಶುಕ್ರವಾರ ರಾತ್ರಿ ಈ ಕಳ್ಳತನ ನಡೆದಿದ್ದು, ಶನಿವಾರ ಅಂಗಡಿಕಾರರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಗಂಜೀಗದ್ದೆ ಕಡೆಯಿಂದ ಬಸ್ ನಿಲ್ದಾಣಕ್ಕೆ ಪ್ರವೇಶಿಸುವ ಕಡೆಯಿದ್ದ ತರಕಾರಿ ಅಂಗಡಿಗೆ ನುಗ್ಗಿದ ಕಳ್ಳರು ಅದಾದ ನಂತರ ಪಕ್ಕದ ಸ್ಟೇಶನರಿ ಅಂಗಡಿಗೂ ಹೋಗಿ ಕದ್ದಿದ್ದಾರೆ.
ಮಹಾದೇವ ಗೌಡ ಅವರ ಅಂಗಡಿ ಪೂರ್ತಿ ಜಾಲಾಡಿದರೂ ಕಳ್ಳರಿಗೆ ಅಲ್ಲಿ ಅವರಿಗೆ ಹಣ ಸಿಕ್ಕಿಲ್ಲ. ಹೀಗಾಗಿ ಅಂಗಡಿಯಲ್ಲಿದ್ದ ಒಂದೆರಡು ತರಕಾರಿ ತಿಂದು ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅದಾದ ನಂತರ ರಾಜನ್ ಮೆಹ್ತಾ ಅವರ ಸ್ಟೇಶನರಿ ಅಂಗಡಿಗೆ ನುಗ್ಗಿದ್ದಾರೆ. ಅಲ್ಲಿದ್ದ ಹಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಜೊತೆಗೆ ಸಿಸಿ ಕ್ಯಾಮರಾಗೂ ಕಳ್ಳರು ಹಾನಿ ಮಾಡಿದ್ದಾರೆ.