ಅಂಕೋಲಾದ ಅಕ್ಷಯಕುಮಾರ ಗೊಯ್ಡು ಅವರ ಬಾಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಅದನ್ನು ಪ್ರಶ್ನಿಸಿದಾಗ ಅವರು ಗಾಂಜಾ ಗುಂಗಿನಲ್ಲಿರುವುದು ಗೊತ್ತಾಗಿದೆ. ದುಶ್ಚಟಕ್ಕೆ ದಾಸರಾದ ಅಕ್ಷಯಕುಮಾರ ಗೊಯ್ಡು ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.
ಅಂಕೋಲಾದ ವಂದಿಗೆ ಹೊಸಗದ್ದೆಯಲ್ಲಿ ಅಕ್ಷಯಕುಮಾರ ಗೊಯ್ಡು (25) ಅವರು ವಾಸವಾಗಿದ್ದಾರೆ. ರಿಕ್ಷಾ ಚಾಲಕರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ದುಶ್ಚಟಕ್ಕೆ ದಾಸರಾಗಿರುವ ಅವರು ಗಾಂಜಾ ಸೇವಿಸಿದ ಗುಂಗನ್ನು ಖುಷಿಯಿಂದ ಅನುಭವಿಸುತ್ತಾರೆ. ಗಾಂಜಾ ಸೇವನೆಯಿಂದ ಆರೋಗ್ಯ ಹದಗೆಡುವ ಬಗ್ಗೆ ಅರಿವಿದ್ದರೂ ಅಕ್ಷಯಕುಮಾರ ಗೊಯ್ಡು ಅವರು ಆ ಚಟದಿಂದ ಹೊರ ಬಂದಿಲ್ಲ.
ಹೀಗಿರುವಾಗ, ಮಾರ್ಚ 14ರಂದು ಅಂಕೋಲಾದ ಜಿ ಸಿ ಸರ್ಕಲ್ ಬಳಿ ಅಕ್ಷಯಕುಮಾರ ಗೊಯ್ಡು ಅವರು ಅನಗತ್ಯವಾಗಿ ಅಲೆದಾಡುತ್ತಿರುವುದನ್ನು ಪೊಲೀಸರು ನೋಡಿದ್ದಾರೆ. ಅಮಲಿನಲ್ಲಿದ್ದ ಅವರ ಬಾಯಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದಾರೆ. ವಿಚಾರಣೆ ನಡೆಸಿದಾಗ ಅಕ್ಷಯಕುಮಾರ ಗೊಯ್ಡು ಅವರೇ ಗಾಂಜಾ ಸೇವಿಸಿದನ್ನು ಒಪ್ಪಿಕೊಂಡಿದ್ದಾರೆ. ಅದಾಗಿಯೂ, ಪೊಲೀಸರು ಕಾನೂನು ಪ್ರಕಾರ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದು, ಗಾಂಜಾ ಸೇವನೆ ದೃಢವಾಗಿದೆ. ಹೀಗಾಗಿ ಅಕ್ಷಯಕುಮಾರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
`ಮಾದಕ ವ್ಯಸನ ಅತ್ಯಂತ ಅಪಾಯ’