ಕಾರವಾರದ ಚೆಂಡಿಯಾದಲ್ಲಿ ಅನಧಿಕೃತವಾಗಿ ಸಿಗಡಿ ಕೃಷಿ ನಡೆಸಲಾಗುತ್ತಿದೆ. ಪಂಚಾಯತ ಪರವಾನಿಗೆಯನ್ನು ಸಹ ಪಡೆಯದೇ ಇಲ್ಲಿ ಕೃಷಿ ಹೊಂಡ ನಿರ್ಮಿಸಿ ಸಿಗಡಿ ಸಾಕಾಣಿಕೆ ಮಾಡಲಾಗುತ್ತಿದೆ. ಈ ವಿಷಯವಾಗಿ ಕಂದಾಯ ಇಲಾಖೆ ಅಧಿಕಾರಿಗಳನ್ನು ಆಡಳಿತಾಧಿಕಾರಿ ಪ್ರಶಾಂತ ಎಚ್ ಎಸ್ ಅವರು ಪ್ರಶ್ನಿಸಿದ್ದು, ಸೂಕ್ತ ದಾಖಲಾತಿ ಒದಗಿಸುವಂತೆ ಸೂಚನೆ ನೀಡಿದ್ದಾರೆ.
ಕಾರವಾರದ ಚೆಂಡಿಯಾ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ ಪರವಾನಿಗೆಯಿಲ್ಲದೆ ಅನಧಿಕೃತವಾಗಿ ನಡೆಸುತ್ತಿರುವ ಸಿಗಡಿ ಕೃಷಿ ಹೊಂಡ ಸ್ಥಳಕ್ಕೆ ಪ್ರಶಾಂತ ಎಚ್ ಎಸ್ ಅವರು ದಿಢೀರ್ ಭೇಟಿ ನೀಡಿದ್ದಾರೆ. ಸಿಗಡಿ ಕೃಷಿಗೆ ಸಂಬAಧಿಸಿ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವೇಳೆ ಚೆಂಡಿಯಾ ಗ್ರಾಮ ಪಂಚಾಯತಗೆ ಭೇಟಿ ನೀಡಿದ ಅವರು ವಿವಿಧ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
`ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು. ಅನಧಿಕೃತ ಕೆಲಸಗಳಿಗೆ ಅವಕಾಶಕೊಡಬಾರದು’ ಎಂದವರು ಸೂಚಿಸಿದ್ದಾರೆ. `ನಿಗಧಿತ ಅವಧಿಯೊಳಗೆ ನಿರ್ಮಾಣ ಮಾಡುವ ಬಗ್ಗೆ ವಿಶ್ವಾಸ ಮೂಡಿಸಬೇಕು’ ಎಂದು ಸೂಚಿಸಿದ್ದಾರೆ. ಈ ವೇಳೆ ಸಾರ್ವಜನಿಕರು ನೀಡಿದ ತಕರಾರು ಅರ್ಜಿಗಳನ್ನು ಹಾಗೂ ಇತರೆ ಕುಂದು ಕೊರತೆ ಅರ್ಜಿಗಳನ್ನು ಪರಿಶೀಲಿಸಿದ್ದಾರೆ. ಬೇಸಿಗೆಗಾಲದಲ್ಲಿ ಕುಡಿಯುವ ನೀರು ಸಮಸ್ಯೆ ಉದ್ಭವಿಸುವ ಸ್ಥಳಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲು ಸಂಬAಧಪಟ್ಟ ಅಧಿಕಾರಿ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಮಳೆಗಾಲದಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರವಾಹ ಉಂಟಾಗುವ ಸಂಭವನೀಯ ಸ್ಥಳಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲು ಸೂಚನೆ ನೀಡಿದರು.
ಹೆದ್ದಾರಿ ಅಂಚಿನಲ್ಲಿರುವ ಚರಂಡಿಗಳಲ್ಲಿರುವ ಮಣ್ಣನ್ನು ಹೂಳೆತ್ತುವ ಕಾಮಗಾರಿಗನ್ನು ಕೈಗೊಳ್ಳಲು ಸಂಬAಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಚೆಂಡಿಯಾ ವ್ಯಾಪ್ತಿಯ ಒಕ್ಕಲಕೇರಿಯಲ್ಲಿ ಉಂಟಾದ ಬೆಂಕಿ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.