ಅಡಿಕೆ, ಕಾಳು ಮೆಣಸು ಹಾಗೂ ಮಾವಿನ ಬೆಳೆಗಾರರು ಅನುಭವಿಸಿದ ನಷ್ಟ ಅರಿತ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹವಾಮಾನ ಆಧಾರಿತ ಬೆಳೆ ವಿಮೆ ದೊರಕಿಸುವಲ್ಲಿ ಹೋರಾಟ ಮಾಡಿದ್ದಾರೆ. ಅದರ ಪರಿಣಾಮ ಈ ದಿನದಿಂದಲೇ ರೈತರ ಖಾತೆಗೆ ಹಣ ಜಮಾ ಆಗುತ್ತಿದೆ. ರೈತರ ಸಮಸ್ಯೆಗೆ ಸ್ಪಂದಿಸಿದ ಸಂಸದರಿಗೆ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಫೋನ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ರೈತರು ಎಲೆ ಚುಕ್ಕಿ ರೋಗದಿಂದ ಕಂಗಾಲಾಗಿದ್ದಾರೆ. ಅಡಕೆ, ಮಾವು, ಕಾಳು ಮೆಣಸು ಸೇರಿದಂತೆ ಬಹುತೇಕ ಬೆಳೆಯ ಇಳುವರಿ ಕುಂಠಿತಗೊAಡು ಆರ್ಥಿಕ ಸಂಕಷ್ಟದಲ್ಲಿದ್ದಾಗ ರೈತರ ಪರವಾಗಿ ರಾಜ್ಯ ಸರ್ಕಾರವು ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಅದಾಗಿಯೂ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸತತ ಪ್ರಯತ್ನಪಟ್ಟು ಕೇಂದ್ರ ಸರ್ಕಾರದ ಮಟ್ಟದಈ ವಿಮಾ ಮೊತ್ತವನ್ನು ಮಂಜೂರಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಹಂತವಾಗಿ ಇಂದು ಸುಮಾರು 14 ಕೋಟಿ ರೂಪಾಯಿಗಳ ಮೊತ್ತ ಖಾತೆಗೆ ಜಮಾ ಆಗಿದೆ’ ಎಂದವರು ಹೇಳಿದ್ದಾರೆ.
`ಸುಮಾರು 74 ಕೋಟಿ ರೂಪಾಯಿಗಳ ವಿಮೆ ಹಣ ಮುಂದಿನ ದಿನದಲ್ಲಿ ರೈತರ ಖಾತೆಗಳಿಗೆ ಹಂತ ಹಂತವಾಗಿ ಜಮೆಯಾಗಲಿದೆ. ತಾಂತ್ರಿಕ ಕಾರಣಗಳಿಂದ ಕೆಲ ದಿನ ವಿಳಂಬವಾಗಿದ್ದರೂ ಧೃತಿಗೆಡದೆ ರೈತರ ಸಂಕಷ್ಟಕ್ಕೆ ಸ್ಪಂದಿಸಿದವರಿಗೆ ಕೃತಜ್ಞತೆ’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ.