ಮುರುಡೇಶ್ವರ ಬಸ್ತಿ ಬಳಿ ಹೆದ್ದಾರಿ ಅಂಚಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಚಾಲಕ ಕಾರುಸಹಿತ ಪರಾರಿಯಾಗಿದ್ದು, ಕಾರು ಹಾಗೂ ಚಾಲಕನ ಶೋಧ ಶುರುವಾಗಿದೆ.
ಭಟ್ಕಳದ ಕಾಯ್ಕಿಣಿ ಅಬ್ರೆಯ ವಾಸು ವೆಂಕ್ಟಾ ಮರಾಠಿ (46) ಅವರು ಮಾರ್ಚ 14ರ ರಾತ್ರಿ ಬಸ್ತಿ ಹತ್ತಿರದ ಹೆದ್ದಾರಿ ಅಂಚಿನಲ್ಲಿ ನಿಂತಿದ್ದರು. ಹೊನ್ನಾವರದಿಂದ ಭಟ್ಕಳ ಕಡೆ ಹೊರಟ ಕಾರು ಅವರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ವಾಸು ಮರಾಠಿ ಅವರ ಕೈ, ತಲೆ, ಕೆನ್ನೆಗೆ ಗಾಯವಾಯಿತು. ಅಪಘಾತದ ಬಗ್ಗೆ ಅರಿವಿದ್ದರೂ ಕಾರಿನ ಚಾಲಕ ವಾಹನ ನಿಲ್ಲಿಸಲಿಲ್ಲ.
ಕೆಎ-47-ಎಮ್-8347 ಸಂಖ್ಯೆಯ ಕಾರು ಡಿಕ್ಕಿ ಹೊಡೆದಿದನ್ನು ಅಲ್ಲಿನವರು ನೋಡಿದರು. ಕಾರಿನ ನೋಂದಣಿ ಬರೆದ ಸ್ಥಳೀಯರು ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಗಾಯಗೊಂಡ ವಾಸು ಅವರ ಸಹೋದರ ಮಂಜುನಾಥ ವೆಂಕ್ಟಾ ಮರಾಠಿ ಅವರು ಕಾರು ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ನೋಂದಣಿ ಸಂಖ್ಯೆಯ ಜೊತೆ ಅವರು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
`ನಿಧಾನವಾಗಿ ವಾಹನ ಓಡಿಸಿ’