ಕೂಲಿ ಕೆಲಸಕ್ಕೆ ಹೋಗಿದ್ದ ಭಟ್ಕಳದ ಮಂಜುನಾಥ ನಾಯ್ಕ ಅವರು ಪೆಟ್ರೊಲ್ ಬಂಕ್ ಪಕ್ಕದ ಖಾಲಿ ಜಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೃದಯಘಾತದಿಂದ ಅವರು ಸಾವನಪ್ಪಿದ ಅನುಮಾನವ್ಯಕ್ತವಾಗಿದೆ.
ಭಟ್ಕಳದ ಕುಕುನಿರ್ ಬಳಿ ಮಂಜುನಾಥ ಜಟ್ಟ ನಾಯ್ಕ (54) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದರು. ಮಾರ್ಚ 14ರಂದು ಬೆಳಗ್ಗೆ 7 ಗಂಟೆಗೆ ಅವರು ಕೂಲಿ ಕೆಲಸಕ್ಕೆ ಹೋಗಿದ್ದರು. ಮರುದಿನ ಮಧ್ಯಾಹ್ನ 2.30ಕ್ಕೆ ಅವರು ಸಾವನಪ್ಪಿದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ.
ಭಾರತ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ದಿಲ್ಮನ್ ಮನೆ ಸಮೀಪದ ಖಾಲಿ ಜಾಗದಲ್ಲಿ ಮಂಜುನಾಥ ನಾಯ್ಕ ಅವರ ಶವ ಕಾಣಿಸಿದೆ. ಅವರು ಹೃದಯಾಘಾತದಿಂದ ಸಾವನಪ್ಪಿದ ಅನುಮಾನವ್ಯಕ್ತವಾಗಿದೆ. ಹುರುಳಿಸಾಲ ಮಿನಿಹಿತ್ತಲು ನಿವಾಸಿ ಕೃಷ್ಣ ಸೋಮಯ್ಯ ನಾಯ್ಕ ಅವರು ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಭಟ್ಕಳ ಶಹರ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿದ್ದಾರೆ.