ಕಾರವಾರ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸ್ವಾದಿ ಸೈಲ್ ಅವರು ತಮ್ಮ ಸೌಂದರ್ಯದಿoದ ಜನರ ಮನಗೆದ್ದಿದ್ದಾರೆ. `ಫೆಮಿನಾ ಮಿಸ್ ಇಂಡಿಯಾ’ ಸ್ಪರ್ಧೆಯ ಅಂತಿಮ ಸುತ್ತಿಗೆ ಸ್ವಾದಿ ಸೈಲ್ ಅವರು ಆಯ್ಕೆಯಾಗಿದ್ದಾರೆ.
ಕೆಐಐಟಿ ಸಂಸ್ಥೆಯವರು `ಫೆಮಿನಾ ಮಿಸ್ ಇಂಡಿಯಾ’ ಸ್ಪರ್ಧೆಯನ್ನು ಆಯೋಜಿಸುತ್ತಾರೆ. ಅವರು ಆಯೋಜಿಸಿದ 63ನೇ ಸುತ್ತಿನ ಸ್ಪರ್ಧೆ ಇದಾಗಿದೆ. ಅಂತಿಮ ಆಡಿಶನ್ ಮುಕ್ತಾಯದ ಹಿನ್ನಲೆ ಅದರ ಫಲಿತಾಂಶವನ್ನು ಕೆಐಐಟಿ ಪ್ರಕಟಿಸಿದ್ದು, ಅದರಲ್ಲಿ ಸ್ವಾದಿ ಸೈಲ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ದೇಶದ ಎಲ್ಲಾ ಭಾಗಗಳಿಂದ ನೂರಾರು ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸೌಂದರ್ಯದ ವಿಷಯದಲ್ಲಿ ಅವರೆಲ್ಲರನ್ನು ಹಿಂದಿಕ್ಕಿ ಸ್ವಾದಿ ಸೈಲ್ ಅವರು ಸಾಧನೆ ಮಾಡಿದ್ದಾರೆ.
ಸೌಂದರ್ಯ ಆರಾದಕರ ಕಣ್ಮನ ಸೆಳೆದಿರುವ ಸ್ವಾದಿ ಸೈಲ್ ಅವರು 23 ತರುಣಿಯರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಈ ರಾಷ್ಟ್ರೀಯ ವೇದಿಕೆಯಲ್ಲಿ ಅವರು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ತಮ್ಮ ವಿದ್ಯಾಬ್ಯಾಸದ ಜೊತೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಸ್ವಾದಿ ಸೈಲ್ ಅವರು ಮಿಂಚುತ್ತಿದ್ದಾರೆ. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿಯೂ ಅವರು ಭಾಗವಹಿಸಿ ಗಮನಸೆಳೆದಿದ್ದಾರೆ.