ಕಾರವಾರದ ಕಡವಾಡದಲ್ಲಿ ತಡರಾತ್ರಿ ಹೊಡೆದಾಟ ನಡೆದಿದೆ. ಕಿನ್ನರ ಸಿದ್ಧವಾಡದ ಪ್ರಶಾಂತ ಗೋವೇಕರ್, ಸಿದ್ಧರ ಐಟಿಐ ಕಾಲೇಜು ಬಳಿಯ ಜ್ಞೇನೇಶ್ವರ ಕೋಳಂಬಕರ್, ನಿತಿನ್ ಕೋಳಂಬಕರ್ ಹಾಗೂ ಗಣೇಶ ಕೋಳಂಬಕರ್ ನಡುವೆ ಈ ಜಟಾಪಟಿ ನಡೆದಿದೆ.
ಮಾರ್ಚ 4ರ ರಾತ್ರಿ 11.40ಕ್ಕೆ ಕಡವಾಡ ಕ್ರಾಸಿನ ಬಳಿ ಈ ಮಾರಾಮಾರಿ ನಡೆದಿದ್ದು, ರಸ್ತೆ ಮದ್ಯೆಯೇ ಗಲಾಟೆ ನಡೆಯುತ್ತಿರುವ ಬಗ್ಗೆ ಆ ಭಾಗದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ. ವಿಷಯ ಕೇಳಿದ ತಕ್ಷಣ ಪೊಲೀಸರು ಅಲ್ಲಿ ದೌಡಾಯಿಸಿದ್ದಾರೆ. ಈ ವೇಳೆ ಕಾರವಾರ ಕಿನ್ನರ ಸಿದ್ದವಾಡದ ಪ್ರಶಾಂತ ದತ್ತಾರಾಮ ಗೋವೇಕರ್, ಸಿದ್ದರ ಐಟಿಐ ಕಾಲೇಜು ಬಳಿಯ ಜ್ಞಾನೇಶ್ವರ ಶಂಬು ಕೋಳಂಬಕರ್, ನಿತಿನ್ ಶಂಬು ಕೋಳಂಬಕರ್ ಹಾಗೂ ಗಣೇಶ ಶಂಬು ಕೋಳಂಬಕರ್ ಪರಸ್ಪರ ಹೊಡೆದಾಟದಲ್ಲಿ ಭಾಗಿಯಾಗಿರುವುದನ್ನು ಪೊಲೀಸರು ನೋಡಿದ್ದಾರೆ
ಅದಾದ ನಂತರ ಪೊಲೀಸರು ಆ ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಕಾರವಾರ ಗ್ರಾಮೀಣ ಠಾಣಾ ಪೊಲೀಸ್ ಸಿಬ್ಬಂದಿ ಹನುಮಂತ ರೆಡ್ಡಿ ಅವರು `ಈ ರೀತಿ ಹೊಡೆದಾಟ ಮಾಡಬೇಡಿ’ ಎಂದು ಬುದ್ದಿ ಹೇಳಿದ್ದಾರೆ. ಅದಾಗಿಯೂ, ಅವರೆಲ್ಲರೂ ಹೊಡೆದಾಟ ಮುಂದುವರೆಸಿದ್ದಾರೆ. ಈ ನಾಲ್ವರ ನಡುವೆ ಹೊಡೆದಾಟಕ್ಕೆ ಕಾರಣ ಏನು? ಎಂಬುದು ಗೊತ್ತಾಗಿಲ್ಲ. ಅದಾಗಿಯೂ, ಪೊಲೀಸರ ಮುಂದೆಯೇ ಹೊಡೆದಾಡಿಕೊಂಡ ಆ ನಾಲ್ವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.