`ಲೋಕಧ್ವನಿ ಹೆಮ್ಮೆಯ ಸಾಧಕ’ ಪ್ರಶಸ್ತಿಗೆ ಭಾಜನವಾಗಿದ್ದ ಶಿರಸಿಯ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ ಇದೀಗ `ಉತ್ತಮ ರ‍್ಬನ್ ಪತ್ತಿನ ಸಹಕಾರಿ ಸಂಘ & ನೌಕರರ ಪತ್ತಿನ ಸಂಘ’ ಪ್ರಶಸ್ತಿ ಸಿಕ್ಕಿದೆ. ಕೆಡಿಸಿಸಿ ಬ್ಯಾಂಕ್ ಈ ಪ್ರಶಸ್ತಿಯ ಘೋಷಣೆ ಮಾಡಿದೆ.
ಕೆಡಿಸಿಸಿ ಬ್ಯಾಂಕ್ ಪ್ರತಿ ರ‍್ಷ ಸಹಕಾರಿ ಸಪ್ತಾಹದ ಅವಧಿಯಲ್ಲಿ ಕರ‍್ಯಕ್ರಮ ನಡೆಸಿ ಪ್ರಶಸ್ತಿ ಪ್ರದಾನ ಮಾಡುತ್ತದೆ. ಈ ಬಾರಿ ಚುನಾವಣೆ ಕಾರಣದಿಂದ ಕರ‍್ಯಕ್ರಮ ನಡೆಸದೇ ಪ್ರಶಸ್ತಿ ನೀಡಲಾಗುತ್ತಿದೆ. ಅದರ ಪ್ರಕಾರ ಉತ್ತಮ ಸಂಘಕ್ಕೆ ನೀಡುವ 10 ಸಾವಿರ ರೂ ಮೊತ್ತದ ಬಹುಮಾನ ಭೂತೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ ಜಮಾ ಆಗಿದೆ. ಅದರೊಂದಿಗೆ ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನರ‍್ದೇಶಕರು ಭೂತೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ ಅಭಿನಂದನಾ ಪತ್ರ ಕಳುಹಿಸಿದ್ದಾರೆ.
2024-25ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕರ‍್ಯ ನರ‍್ವಹಣೆ ಮಾಡಿರುವ ಕಾರಣ ಸಂಘಕ್ಕೆ ಪ್ರಶಸ್ತಿ ದೊರೆತಿದೆ. ಈ ಹಿಂದೆ ಇದೇ ಕೆಡಿಸಿಸಿ ಬ್ಯಾಂಕ್ ನಲ್ಲಿ ವಿಭಾಗೀಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸಹಕಾರಿ ಧುರೀಣ ವಸಂತ ಶೆಟ್ಟಿ ಅವರಿಂದ ಸ್ಥಾಪಿತವಾದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ತನ್ನ ಬೆಳ್ಳಿ ಹಬ್ಬದ ಸಂರ‍್ಭದಲ್ಲಿ ಉತ್ತಮ ಸಂಘ ಪ್ರಶಸ್ತಿಗೆ ಪಾತ್ರವಾಗಿರುವುದು ಇಲ್ಲಿನ ವಿಶೇಷ. ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಸಂಘದ ಅಧ್ಯಕ್ಷ ಶ್ರೀಧರ ಮೊಗೇರ್, ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ಆಂತರಿಕ ಸಲಹೆಗಾರ ಪಿ ಡಿ ಮದ್ಗುಣಿ, ಮುಖ್ಯ ಕರ‍್ಯನರ‍್ವಾಹಕ ವಿನಾಯಕ ಶೆಟ್ಟಿ ಹಾಗೂ ಸಂಘದ ನರ‍್ದೇಶಕ ಮಂಡಳಿ-ಸಿಬ್ಬಂದಿ ರ‍್ಗದವರು ರ‍್ಷ ವ್ಯಕ್ತಪಡಿಸಿದ್ದಾರೆ.