ಕಾಡಿನಲ್ಲಿರುವ ತಾಯಿ ಬಿಟ್ಟು ಶಿರಸಿಗೆ ಬಂದ ಮರಿ ಚಿರತೆ ಜನಸ್ನೇಹಿಯಾಗಿದೆ. ಗೌಡಳ್ಳಿ ಬಳಿ ಚಿರತೆ ನೋಡಿದ ಜನ ಅದನ್ನು ಮುದ್ದಿಸಲು ಶುರು ಮಾಡಿದ್ದಾರೆ!
ಭಾನುವಾರ ಶಿರಸಿ ತಾಲೂಕಿನ ಗೌಡಳ್ಳಿ ಹತ್ತಿರದ ಖಾನ ನಗರದ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿತು. ಮೊದಲು ಜನ ಅದನ್ನು ಬೆಕ್ಕು ಎಂದು ಭಾವಿಸಿದ್ದರು. ಆದರೆ, ಬೆಕ್ಕಿಗಿಂತಲೂ ಗಾತ್ರದಲ್ಲಿ ದೊಡ್ಡದಾಗಿರುವುದು ಹಾಗೂ ಮೈಮೇಲೆ ಚುಕ್ಕಿಗಳಿರುವ ಕಾರಣ ಅದು ಚಿರತೆ ಎಂದು ಸ್ಪಷ್ಠವಾಯಿತು. ಜನ ಹತ್ತಿರ ಹೋದರೂ ಚಿರತೆ ಹೆದರಲಿಲ್ಲ. ಜನರನ್ನು ನೋಡಿ ತನ್ನ ವ್ಯಾಘ್ರ ಸ್ವರೂಪವನ್ನು ಪ್ರದರ್ಶಿಸಲಿಲ್ಲ.
ಈ ಮರಿ ಚಿರತೆಯನ್ನು ನೋಡಿದ ಜನರು ಪ್ರೀತಿಯಿಂದ ಮೈ ಮುಟ್ಟಿದ್ದಾರೆ. ಆ ವೇಳೆಯಲ್ಲಿಯೂ ಚಿರತೆ ವಿರೋಧವ್ಯಕ್ತಪಡಿಸಿಲ್ಲ. ಅದಾದ ನಂತರ ಕೆಲವರು ಚಿರತೆಯ ವಿಡಿಯೋ ಮಾಡಿದ್ದಾರೆ. ಮನುಷ್ಯ ಮುಟ್ಟಿದರೂ ಚಿರತೆ ಅಲ್ಲಿಂದ ಓಡದಿರುವುದು ಅಚ್ಚರಿ ತಂದಿದೆ. ಜೊತೆಗೆ ಅತ್ಯಂತ ಸೌಮ್ಯವಾಗಿ ವರ್ತಿಸಿರುವುದು ಸಹ ವಿಶೇಷವೆನಿಸಿದೆ.
`ಗೌಡಳ್ಳಿ ಬಳಿ ಚಿರತೆ ಕಾಣಿಸಿಕೊಂಡಿದ್ದು ಸತ್ಯ. ತನ್ನ ಪಾಡಿಗೆ ತಾನು ಆ ಚಿರತೆ ಕಾಡು ಸೇರಿದೆ. ಕೆಲವರು ಚಿರತೆಯನ್ನು ಮುಟ್ಟಿದ ವಿಡಿಯೋ ಬಂದಿದ್ದು, ಆ ವಿಡಿಯೋ ಇಲ್ಲಿಯದೆಯಾ? ಎನ್ನುವುದರ ಬಗ್ಗೆ ಖಚಿತವಾಗಿಲ್ಲ’ ಎಂದು ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ ಅವರು ಮಾಹಿತಿ ನೀಡಿದರು. ಅತ್ಯಂತ ನಿತ್ರಾಣಗೊಂಡಿದ್ದರಿAದ ಚಿರತೆ ಈ ರೀತಿ ವರ್ತಿಸಿರುವ ಬಗ್ಗೆ ಜನ ಮಾತನಾಡಿದರು.
ಜನರ ಕೈಗೆ ಸಿಕ್ಕ ಚಿರತೆಯ ವಿಡಿಯೋ ಇಲ್ಲಿ ನೋಡಿ..