ಕುಮಟಾ ದಿವಳ್ಳಿಯ ರೇಷ್ಮಾ ನಾಯ್ಕ ಅವರು ತಮ್ಮ ಮಕ್ಕಳಿಬ್ಬರ ಜೊತೆ ಮನೆ ಬಿಟ್ಟು ಹೋಗಿದ್ದಾರೆ. ಐದು ದಿನ ಕಳೆದರೂ ಅವರು ಮನೆಗೆ ಮರಳಿಲ್ಲ.
ಏಪ್ರಿಲ್ 16ರ ಮಧ್ಯಾಹ್ನ ರೇಷ್ಮಾ ನಾಯ್ಕ ಅವರು ತಮ್ಮ 10 ವರ್ಷದ ಮಗಳು ಜಾಹ್ನವಿ ಹಾಗೂ ಏಳು ವರ್ಷದ ಯಶಿಕಾ ಅವರ ಜೊತೆ ಮನೆಯಿಂದ ಹೊರಗೆ ಹೋಗಿದ್ದಾರೆ. ತವರು ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದ ರೇಷ್ಮಾ ನಾಯ್ಕ ಅವರು ತವರು ಮನೆ ತಲುಪಿಲ್ಲ. ಪತಿಯ ಮನೆಗೆ ಸಹ ಅವರು ಮರಳಲಿಲ್ಲ. ಮೂವರು ಕಾಣೆಯಾದ ಬಗ್ಗೆ ಕುಟುಂಬದವರು ಆತಂಕ್ಕೆ ಒಳಗಾಗಿದ್ದಾರೆ.
ಆ ಮೂವರ ಬಗ್ಗೆ ಕುಟುಂಬದವರು ಎಲ್ಲಾ ಕಡೆ ಫೋನ್ ಮಾಡಿ ವಿಚಾರಿಸಿದ್ದಾರೆ. ಬಂಧು-ಮಿತ್ರರ ಮನೆಗೂ ಹೋಗಿ ಹುಡುಕಾಟ ನಡೆಸಿದ್ದಾರೆ. ಆದರೆ, ತಾಯಿ-ಮಕ್ಕಳು ಎಲ್ಲಿಯೂ ಸಿಕ್ಕಿಲ್ಲ. ಅವರ ಬಗ್ಗೆ ಯಾವ ಸುಳಿವು ಸಹ ಗೊತ್ತಾಗಿಲ್ಲ. ಸದ್ಯ ಪೊಲೀಸರು ಸಹ ರೇಷ್ಮಾ ನಾಯ್ಕ ಅವರ ಜೊತೆ ಮಕ್ಕಳ ಹುಡುಕಾಟ ಶುರು ಮಾಡಿದ್ದಾರೆ. ಕನ್ನಡ ಹಾಗೂ ಕೊಂಕಣಿ ಮಾತನಾಡುವ ಅವರು ಕಂಡರೆ ಫೋನ್ ಮಾಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಫೋನ್ ಮಾಡಬೇಕಾದ ಸಂಖ್ಯೆ: 9480805272