ಯಲ್ಲಾಪುರದ ಎಲ್ಎಸ್ಎಂಪಿ ಸೊಸೈಟಿಯೂ ಈ ವರ್ಷ ವಜ್ರ ಮಹೋತ್ಸವ ಮಹೋತ್ಸವದ ಸಂಭ್ರಮದಲ್ಲಿದೆ. ಮೇ 12ರಂದು ಸೊಸೈಟಿಯ ನೂತನ ಕಟ್ಟಡವೂ ಉದ್ಘಾಟನೆ ಆಗಲಿದೆ.
ಆ ದಿನ ಬೆಳಗ್ಗೆ 10.30ಕ್ಕೆ ವಜ್ರ ಮಹೋತ್ಸವ ಸಭಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ನೂತನ ಕಟ್ಟಡವನ್ನು ಶಾಸಕ ಶಿವರಾಮ ಹೆಬ್ಬಾರ, ಸಭಾಭವನವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಉದ್ಘಾಟಿಸಲಿದ್ದಾರೆ. ಅದೇ ದಿನ ಮಧ್ಯಾಹ್ನ 3ಗಂಟೆಗೆ ಸಂಘದ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು ಹಾಗೂ ಮಾಜಿ ಮುಖ್ಯಕಾರ್ಯನಿರ್ವಾಹಕರನ್ನು ಸನ್ಮಾನಿಸಲಾಗುತ್ತದೆ. ಸಂಜೆ 5.30 ಕ್ಕೆ ಸಂಘದ ಭದ್ರತಾ ಕೊಠಡಿಯನ್ನು ಸ್ವರ್ಣವಲ್ಲಿಯ ಶ್ರೀ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿ, ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ಚಂದ್ರಹಾಸ ಚರಿತ್ರೆ ಹಾಗೂ ಮಾಯಾ ಮೃಗಾವತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಎಲ್ಲಾ ವಿಷಯಗಳ ಬಗ್ಗೆ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಾಗರಾಜ ಕವಡಿಕೆರೆ ಮಾಹಿತಿ ನೀಡಿದ್ದಾರೆ. `1950 ರಲ್ಲಿ 10 ಸದಸ್ಯರಿಂದ ಆರಂಭವಾದ ಸಂಘವು ಈಗ 3500 ಸದಸ್ಯರನ್ನು ಹೊಂದಿದೆ. ಉಪಳೇಶ್ವರ ಹಾಗೂ ನಂದೊಳ್ಳಿಯಲ್ಲಿ ಶಾಖೆಗಳನ್ನು ಹೊಂದಿದ್ದು, ಸದಸ್ಯರಿಗಾಗಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎಂದವರು ಹೇಳಿದ್ದಾರೆ. `ಆಪತ್ ಠೇವು, ಚಿಕಿತ್ಸೆಗೆ ಸಹಾಯ, ವಿದ್ಯಾರ್ಥಿ ವೇತನ, ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ, ಅಂತ್ಯ ಸಂಸ್ಕಾರ ನಿಧಿ, ಆರೋಗ್ಯ ತಪಾಸಣಾ ಶಿಬಿರವನ್ನು ಸೊಸೈಟಿ ಆಯೋಜಿಸಿದೆ’ ಎಂದವರು ತಿಳಿಸಿದ್ದಾರೆ. ಸೊಸೈಟಿ ಉಪಾಧ್ಯಕ್ಷ ಟಿ ಆರ್ ಹೆಗಡೆ, ನಿರ್ದೇಶಕರಾದ ಸುಬ್ಬಣ್ಣ ದಾನ್ಯಾನಕೊಪ್ಪ, ಅಪ್ಪು ಆಚಾರಿ, ಮಹಾಬಲೇಶ್ವರ ಭಟ್ಟ ಮಾಲದಮನೆ, ಗಾಬ್ರಿಯಲ್ ಫರ್ನಾಂಡೀಸ್, ಗೋಪಾಲಕೃಷ್ಣ ಭಟ್ಟ, ಗಣಪತಿ ಕವಡಿಕೆರೆ, ಮುಖ್ಯಕಾರ್ಯನಿರ್ವಾಹಕ ಎಂ ಎಸ್ ಹೆಗಡೆ ಅವರು ಇದ್ದರು.