ಬೈಕ್ ಸವಾರರು ಹೆಲ್ಮೆಟ್ ಧರಿಸದೇ ವಾಹನ ಓಡಿಸುವುದನ್ನು ನೋಡಿದ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಈ ಬಗ್ಗೆ ಜನ ಜಾಗೃತಿಗೆ ಬೈಕ್ ರ‍್ಯಾಲಿ ನಡೆಸಿದ್ದಾರೆ. `ಹೆಲ್ಮೆಟ್ ಧರಿಸಿ.. ಬೈಕ್ ಓಡಿಸಿ’ ಎಂದು ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ 2024ರಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ ಪರಿಣಾಮ 18 ಜನ ಸಾವನಪ್ಪಿದ್ದಾರೆ. 33 ಅಪಘಾತಗಳು ನಡೆದಿದ್ದು, ಅನೇಕರು ಗಾಯಗೊಂಡಿದ್ದಾರೆ. 2025 ರಲ್ಲಿ 64 ಅಪಘಾತ ನಡೆದಿದ್ದು, 35 ಜನ ಸಾವನಪ್ಪಿದ್ದಾರೆ. ಈ ಹಿನ್ನಲೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಜನರ ಜೀವ ಉಳಿಸುವ ಮಹತ್ವದ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
ಮದ್ಯಪಾನ ಮಾಡಿ ವಾಹನ ಓಡಿಸುವವರಿಗೂ ಅವರು ಅರಿವು ಮೂಡಿಸಿದ್ದಾರೆ. 2023ರಿಂದ ಈವರೆಗೆ 745 ಜನ ಮದ್ಯಪಾನ ಮಾಡಿ ವಾಹನ ಓಡಿಸುವ ಮೂಲಕ ಸಿಕ್ಕಿ ಬಿದ್ದಿದ್ದು, ಆ ಪೈಕಿ 467 ಜನರ ಚಲನಾ ಪರವಾನಿಗೆಯನ್ನು ರದ್ದು ಮಾಡಲಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಜನರಿಗೆ ತಿಳಿಸಲು ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ಸೋಮವಾರ ಬೈಕ್ ಸವಾರರಿಗೆ ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಪೊಲೀಸರು ಹೆಲ್ಮೆಟ್ ಧರಿಸಿ ಬೈಕ್ ಓಡಿಸುವ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ.