ಶಿರಸಿಯಲ್ಲಿ ಸುರಿದ ಮಳೆಗೆ ಹಲವು ಅವಾಂತರಗಳು ನಡೆದಿದೆ. ಬನವಾಸಿ ರಸ್ತೆಯಲ್ಲಿ ಮನೆ ಮುಂದೆ ನಿಂತಿದ್ದ ಕಾರಿನ ಮೇಲೆ ತೆಂಗಿನ ಮರ ಬಿದ್ದಿದೆ.
ಶುಕ್ರವಾರ ರಾತ್ರಿ ಶಿರಸಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದ ಗುಡುಗು-ಮಳೆಯಾಗಿದೆ. ಅಲ್ಲಲ್ಲಿ ಸಿಡಿಲಿನ ಸದ್ದು ಕೇಳಿಸಿದೆ. ಜೊತೆಗೆ ರಭಸ ಗಾಳಿಯೂ ಬೀಸಿದೆ. ಗ್ರಾಮೀಣ ಪ್ರದೇಶಗಳ ಜನ ಸಂಪರ್ಕ ವ್ಯವಸ್ಥೆ ಇಲ್ಲದೇ ಸಮಸ್ಯೆ ಅನುಭವಿಸಿದ್ದಾರೆ. ದಿಡೀರ್ ಮಳೆ ಪರಿಣಾಮ ಅಲ್ಲಲ್ಲಿ ಮೊಬೈಲ್ ನೆಟ್‌ವರ್ಕ ಸಿಗದ ಸಮಸ್ಯೆಯೂ ಕಾಣಿಸಿಕೊಂಡಿದ್ದರಿoದ ಜನ ತೊಂದರೆಗೆ ಒಳಗಾಗಿದ್ದಾರೆ.
ಈ ಎಲ್ಲದರ ನಡುವೆ ಬನವಾಸಿ ರಸ್ತೆಯ ಬಳಿ ತೆಂಗಿನ ಮರ ಮುರಿದು ಬಿದ್ದಿದೆ. ಶಿರಸಿ ನಗರದ ಬನವಾಸಿ ರಸ್ತೆಯಲ್ಲಿನ ಸಂಘಧಾಮದ ಬಳಿ ಸಂಜೆ ವೇಳೆ ದೊಡ್ಡ ಗಾಳಿ ಬೀಸಿದ್ದು, ಆ ಗಾಳಿ ರಭಸಕ್ಕೆ ಮರ ಮುರಿದಿದೆ. ಮುರಿದ ಮರ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದ್ದರಿಂದ ಕಾರು ಜಖಂ ಆಗಿದೆ. ಮರ ಮುರಿದ ದೃಶ್ಯ ಸಿಸಿ ಕ್ಯಾಮರಾದಲ್ಲಿಯೂ ಸೆರೆಯಾಗಿದೆ.