ನೀರಿನ ಟಾಕಿ ಕಟ್ಟಲು ಅಗತ್ಯವಿರುವ ಎಂ ಸ್ಯಾಂಡ್ ತುಂಬಿಕೊoಡು ಸಾಗುತ್ತಿದ್ದ ಟಾಕ್ಟರ್ ಅಂಕೋಲಾದಲ್ಲಿ ಪಲ್ಟಿಯಾಗಿದೆ. ಪರಿಣಾಮ ಟಾಕ್ಟರ್ ಚಾಲಕ ಗಾಯಗೊಂಡು ಸಾವನಪ್ಪಿದ್ದಾರೆ.
ಧಾರವಾಡ ಕಲಘಟಗಿಯ ಶಂಭುಲಿoಗಪ್ಪ ಬೊಮ್ಮನಳ್ಳಿ (35) ಅವರು ಅಂಕೋಲಾದಲ್ಲಿ ಟಾಕ್ಟರ್ ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು. ಜೂನ್ 1ರ ಬೆಳಗ್ಗೆ ಅವರು ಕಣಿಗಿಲ್ ಕಡೆಯಿಂದ ಹೊನ್ನೆಬೈಲ್ ಕಡೆಗೆ ಅವರು ಟಾಕ್ಟರ್ ಓಡಿಸಿದ್ದು, ಎಂ ಸ್ಯಾಂಡ್ ತುಂಬಿಕೊoಡಿದ್ದ ಆ ಟಾಕ್ಟರ್ ಭಂಡಾರದೇವಿ ದೇವಾಲಯದ ಬಳಿ ದಿಬ್ಬ ಹತ್ತಿತು. ಟಾಕ್ಟರ್ ವೇಗ ಜಾಸ್ತಿಯಿದ್ದ ಕಾರಣ ಇಂಜಿನ್ ಪಲ್ಟಿಯಾಯಿತು. ನೀರಿನ ಟಾಕಿ ಕಟ್ಟುವ ಸ್ಥಳ ತಲುಪುವ ಮೊದಲೇ ಟಾಕ್ಟರ್ ತಿರುಗಿ ಬಿದ್ದಿತು. ಪರಿಣಾಮ ಟಾಕ್ಟರ್ ಚಾಲಕ ಶಂಭುಲಿoಗಪ್ಪ ಬೊಮ್ಮನಳ್ಳಿ ಅವರು ಗಾಡಿ ಅಡಿಗೆ ಬಿದ್ದು ಗಾಯ ಮಾಡಿಕೊಂಡರು.
ಅದಾದ ನಂತರ ಅವರನ್ನು ಅಂಕೋಲಾ ಆಸ್ಪತ್ರೆಗೆ ತರುವ ಪ್ರಯತ್ನ ನಡೆಯಿತು. ಆಸ್ಪತ್ರೆಗೆ ಬರುವ ಮುನ್ನವೇ ಶಂಭುಲಿAಗಪ್ಪ ಬೊಮ್ಮನಳ್ಳಿ ಅವರು ಉಸಿರು ನಿಲ್ಲಿಸಿದರು. ಸರ್ಕಾರಿ ಆಸ್ಪತ್ರೆ ವೈದ್ಯರು ಸಾವನ್ನು ದೃಢಪಡಿಸಿದ್ದು, ಅತಿ ವೇಗವಾಗಿ ಟಾಕ್ಟರ್ ಓಡಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಧಾರವಾಡದ ಬಸಪ್ಪ ರಾಮಪ್ಪ ಡೊಳ್ಳೀನ ಅವರು ಪೊಲೀಸರಿಗೆ ವರದಿ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿದರು.