ಮೇಷ ರಾಶಿ: ನೀವು ಮಾಡುವ ಕೆಲಸದಲ್ಲಿ ಧೈರ್ಯವಾಗಿರಿ. ಸಂವಹನ ಕೊರತೆ ಸಮಸ್ಯೆ ಆಗದಂತೆ ಎಚ್ಚರವಹಿಸಿ. ಮಾನಸಿಕ ಒತ್ತಡದ ಕೆಲಸಗಳನ್ನು ಮಾಡಬೇಡಿ.
ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಸಣ್ಣ ಪ್ರಮಾಣದ ಲಾಭ ಸಿಗಲಿದೆ. ನಿಮ್ಮ ನಿರ್ಧಾರಗಳು ಸರಿಯಾದ ದಾರಿಯಲ್ಲಿರಲಿ. ಆರೋಗ್ಯದ ಕಡೆ ಗಮನಹರಿಸಿ.
ಮಿಥುನ ರಾಶಿ: ನಿಮ್ಮ ಆಸಕ್ತಿ ಹೊಸ ವಿಷಯದ ಕಡೆ ಇರಲಿ. ಉದ್ಯೋಗದ ವಿಷಯದಲ್ಲಿ ಪ್ರಗತಿ ಆಗಲಿದೆ. ಯೋಗ ಹಾಗೂ ಧ್ಯಾನ ನಿಮಗೆ ಉತ್ತಮ ವಾತಾವರಣ ನೀಡಲಿದೆ.
ಕರ್ಕ ರಾಶಿ: ಸನ್ನಿವೇಶಗಳನ್ನು ಸರಿಯಾಗಿ ನಿಭಾಯಿಸಿ. ಆತ್ಮಿಯರ ಒಡನಾಟ ತಪ್ಪಿಸಿಕೊಳ್ಳಬೇಡಿ. ವ್ಯಾಪಾರದಲ್ಲಿ ಲಾಭ ಆಗಲಿದೆ.
ಸಿಂಹ ರಾಶಿ: ಸ್ನೇಹಿತರ ಜೊತೆ ಸಮಯ ಸಿಗಲಿದೆ. ಉದ್ಯೋಗ ವಿಷಯದಲ್ಲಿ ಬದಲಾವಣೆ ಆಗಲಿದೆ. ಕಷ್ಟದ ಸನ್ನಿವೇಶಗಳು ಎದುರಾಗಬಹುದು.
ಕನ್ಯಾ ರಾಶಿ: ಉದ್ಯೋಗದ ವಿಷಯದಲ್ಲಿ ಉತ್ಸಾಹ ಕಡಿಮೆ ಆಗಲಿದೆ. ಜೀವನಕ್ಕೆ ಹೊಸ ಕ್ರಿಯಾಶೀಲತೆ ಅಗತ್ಯವಿದೆ. ಹಳೆ ಸಮಸ್ಯೆಗಳು ದೂರವಾಗಿ ಹೊಸ ಸಮಸ್ಯೆ ಬರುವ ಲಕ್ಷಣವಿದೆ.
ತುಲಾ ರಾಶಿ: ನಿಮ್ಮ ಕ್ರಿಯಾತ್ಮಕ ಚಟುವಟಿಕೆಗಳಿಗೆ ಬೆಲೆ ಸಿಗಲಿದೆ. ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ಆರೋಗ್ಯದ ಕಡೆ ಗಮನಹರಿಸುವುದು ಅಗತ್ಯ.
ವೃಶ್ಚಿಕ ರಾಶಿ: ಹಳೆಯ ಜವಾಬ್ದಾರಿಗಳಿಂದ ಮುಕ್ತರಾಗುವಿರಿ. ಹೊಸ ಹೊಣೆಯನ್ನು ಹೋರುವಿರಿ. ಮಾನಸಿಕ ನೆಮ್ಮದಿಗೆ ಅಗತ್ಯವಿರುವ ಕೆಲಸ ಮಾಡಿ.
ಧನು ರಾಶಿ: ಕಡಿಮೆ ಕೆಲಸವೂ ನಿಮಗೆ ಹೆಚ್ಚು ಫಲ ಕೊಡಲಿದೆ. ಯಶಸ್ಸು ನಿಮ್ಮ ಹತ್ತಿರದಲ್ಲಿದೆ. ಹಣಕಾಸಿನ ಸ್ಥಿರತೆ ಸಾಧಿಸುವುದು ಮುಖ್ಯ.
ಮಕರ ರಾಶಿ: ದೂರದ ಊರಿನ ಪ್ರಯಾಣ ಈ ದಿನ ಬೇಡ. ಕೆಲಸದಲ್ಲಿ ಸಾಧನೆ ಆಗಬೇಕು ಎಂದರೆ ತಾಳ್ಮೆ ಅಗತ್ಯ. ಪುಸ್ತಕ ಓದು ನಿಮ್ಮ ಜ್ಞಾನ ಅಭಿವೃದ್ಧಿಗೆ ಸಹಾಯಕ.
ಕುಂಭ ರಾಶಿ: ಉದ್ಯೋಗ-ವ್ಯಾಪಾರದಲ್ಲಿ ಸುಧಾರಣೆ ಸಾಧ್ಯವಿದೆ. ಕುಟುಂಬದವರ ಆಗು-ಹೋಗುಗಳಿಗೆ ಸ್ಪಂದಿಸಿ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಿರಿ. ಚಿಕ್ಕ ಸಮಸ್ಯೆ ನಿಮ್ಮನ್ನು ಕಾಡಬಹುದು.
ಮೀನ ರಾಶಿ: ಸಣ್ಣ ಸಣ್ಣ ಸವಾಲುಗಳು ಸಹ ನೀವು ಕಳೆಗುಂದುವAತೆ ಮಾಡಬಹುದು. ನೆಮ್ಮದಿಗಾಗಿ ಧ್ಯಾನ ಮಾಡಿ. ಹಣಕಾಸು ಲಾಭ ಆಗಲಿದೆ.