ಮಂಗಳೂರಿಗೆ ಹೋಗಿ ಶಿಕಾರಿ ಶುರು ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಈಶ್ವರ ಮರಾಠಿ ಅರಣ್ಯ ಸಂಚಾರಿ ದಳದವರಿಗೆ ಸಿಕ್ಕಿಬಿದ್ದಿದ್ದಾರೆ. ಮಂಗಳೂರು ನಗರದ ಕೆಪಿಟಿ ಜಂಕ್ಷನ್ ಬಳಿ ಚಿಪ್ಪು ಹಂದಿಯ ಚಿಪ್ಪು ಮಾರಾಟ ಮಾಡುವಾಗ ಅಧಿಕಾರಿಗಳು ದಾಳಿ ಮಾಡಿದ್ದು, ಈಶ್ವರ ಮರಾಠಿ ಅವರನ್ನು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಈಶ್ವರ ನಾಗು ಮರಾಠಿ ಅವರು ಮಂಗಳೂರಿಗೆ ಹೋಗಿದ್ದರು. 3ಕಿಲೋ ಚಿಪ್ಪು ಹಂದಿಯ ಚಿಪ್ಪು ಹಿಡಿದು ಅವರು ಮಾರಾಟಕ್ಕೆ ಕೂತಿದ್ದರು. ಕಾಡು ಮಾಂಸ ಮಾರಾಟಕ್ಕಾಗಿ ಗಿರಾಕಿ ಹುಡುಕುತ್ತಿದ್ದ ಈಶ್ವರ ಮರಾಠಿ ಅವರನ್ನು ಅರಣ್ಯ ಸಿಬ್ಬಂದಿ ಗಮನಿಸಿದರು. ಕಾಡು ಪ್ರಾಣಿ ಹತ್ಯೆ ಮಾಡಿದ ಬಗ್ಗೆ ಅರಣ್ಯ ಸಿಬ್ಬಂದಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯ ಸಂಚಾರಿ ದಳದವರು ದಾಳಿ ಮಾಡಿದರು.
ಅಧಿಕಾರಿಗಳು ಈಶ್ವರ ಮರಾಠಿ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವರ ಬಳಿಯಿದ್ದ ಚಿಪ್ಪು ಹಂದಿಯ ಚಿಪ್ಪುಗಳನ್ನು ವಶಕ್ಕೆಪಡೆದರು. ನ್ಯಾಯಾಲಯ ಈಶ್ವರ ಮರಾಠಿ ಅವರನ್ನು ನ್ಯಾಯಾಂಗ ಬಂಧನಕ್ಕೆವಹಿಸಿದೆ. ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ ಆರ್ ಹಾಗೂ ಸಿಬಂದಿ ತಾರನಾಥ ಎಸ್ ಮತ್ತು ಅಬ್ದುಲ್ ರವೂಫ್ ಕಾರ್ಯಾಚರಣೆಯಲ್ಲಿದ್ದರು.