ಶಿರಸಿಯ ಮಣಿಪುರಂ ಫೈನಾನ್ಸಿನಲ್ಲಿ ಕೆಲಸ ಮಾಡುವ ಮ್ಯಾನೇಜರ್’ಗೆ ಗಾಂಧೀನಗರದ ರಾಘವೇಂದ್ರ ಕಲ್ಲಕುಟ್ರಿ ಹಾಗೂ ಅಂಬಾಗಿರಿಯ ರಾಮಕೃಷ್ಣ ಹೆಗಡೆ ಸೇರಿ ಮೋಸ ಮಾಡಿದ್ದಾರೆ. ಚಿನ್ನ ಅಡವಿಡುವ ನೆಪದಲ್ಲಿ ಅವರಿಬ್ಬರು ಸೇರಿ ಮಣಿಪುರಂ ಫೈನಾನ್ಸಿಗೆ 4.80 ಲಕ್ಷ ರೂ ಯಾಮಾರಿಸಿದ್ದಾರೆ!
ADVERTISEMENT
ಶಿರಸಿಯ ಮಣಿಪುರಂ ಫೈನಾನ್ಸಿನ ಲ್ಲಿ ಶಾಖಾ ವ್ಯವಸ್ಥಾಪಕಿಯಾಗಿದ್ದವರಿಗೆ ಜೂನ್ 1ರಂದು ರಾಘವೇಂದ್ರ ಕಲ್ಲಕುಟ್ರಿ ಅವರು ಫೋನ್ ಮಾಡಿ `ಒಬ್ಬನನ್ನು ಕಳುಹಿಸುತ್ತೇನೆ. ಅವನ ಹೆಸರಿನಲ್ಲಿ ಖಾತೆ ತೆರೆಯಬೇಕು’ ಎಂದಿದ್ದಾರೆ. ಅಂಬಾಗಿರಿಯ ರಾಮಕೃಷ್ಣ ರಾಮಚಂದ್ರ ಹೆಗಡೆ ಅವರು ಶಾಖೆಗೆ ಬಂದಿದ್ದು, ಮ್ಯಾನೇಜರ್ ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿ ಖಾತೆ ತೆರೆದುಕೊಟ್ಟಿದ್ದಾರೆ.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಅದಾದ ನಂತರ ರಾಘವೇಂದ್ರ ಕಲ್ಲಕುಟ್ರಿ ಅವರು ಮತ್ತೆ ಮ್ಯಾನೇಜರ್’ಗೆ ಫೋನ್ ಮಾಡಿ ಚಿನ್ನದ ಮೇಲೆ ಸಾಲ ಕೊಡುವಂತೆ ಸೂಚಿಸಿದ್ದಾರೆ. ಸಾಲ ಮಂಜೂರಿ ಮಾಡಿದ ನಂತರ `ಕೆನರಾ ಬ್ಯಾಂಕಿನಲ್ಲಿ ಚಿನ್ನವಿದ್ದು, ಅದನ್ನು ಬಿಡಿಸಿಕೊಂಡು ಬರುವೆ’ ಎಂದು ಹೇಳಿ ಅಲ್ಲಿಂದ ಹೊರಟಿದ್ದಾರೆ. ಇದಕ್ಕೆ ಪೂರಕವಾಗಿ ಕೆನರಾ ಬ್ಯಾಂಕಿನ ದೇವಿಕೆರೆ ಶಾಖೆಯಲ್ಲಿ 72.700 ಗ್ರಾಂ ಚಿನ್ನಾಭರಣವನ್ನು ಅಡವಿಟ್ಟ ದಾಖಲೆಯನ್ನು ತೋರಿಸಿದ್ದಾರೆ. ಅಲ್ಲಿ ಕಡಿಮೆ ಮೊತ್ತ ನೀಡಿದ ಕಾರಣ ಹೆಚ್ಚಿನ ಮೊತ್ತ ಅಗತ್ಯವಿರುವ ಬಗ್ಗೆ ಹೇಳಿದ್ದಾರೆ. ಆ ಮಾತು ನಂಬಿದ ಮ್ಯಾನೇಜರ್ 4.80 ಲಕ್ಷ ರೂ ಸಾಲ ನೀಡಿದ್ದಾರೆ. ಆದರೆ, ರಾಮಕೃಷ್ಣ ಹೆಗಡೆ ಅವರು ಫೈನಾನ್ಸಿಗೆ ಮೋಸ ಮಾಡಿದ್ದಾರೆ.
ಆದರೆ, ಸಾಲ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿ ಇಬ್ಬರೂ ಬ್ಯಾಂಕ್ ಹೊರಹೋದವರು ಮತ್ತೆ ಬಂದಿಲ್ಲ. ಕೆನರಾ ಬ್ಯಾಂಕಿನಲ್ಲಿದ್ದ ಚಿನ್ನವನ್ನು ಬಿಡಿಸಿಕೊಂಡವರು ಅದನ್ನು ಮಣಿಪುರಂ ಫೈನಾನ್ಸಿಗೆ ಹಸ್ತಾಂತರಿಸಲಿಲ್ಲ. ಈ ಬಗ್ಗೆ ಮ್ಯಾನೇಜರ್’ವಿಚಾರಿಸಿದಾಗ ರಾಘವೇಂದ್ರ ಕಲ್ಲಕುಟ್ರಿ ಹಾಗೂ ರಾಮಕೃಷ್ಣ ಹೆಗಡೆ ಪರಸ್ಪರ ಹೊಣೆಗಾರಿಕೆಯನ್ನು ಒಬ್ಬರ ಮೇಲೊಬ್ಬರು ಹಾಕಿಕೊಂಡು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಮ್ಯಾನೇಜರ್’ಗೆ ಬೈದು ನಿಂದಿಸಿದ್ದಾರೆ.