ಭಟ್ಕಳದ ಸೂಪರ್ ಮಾರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಶಾಹಿದ್ ಖಾನ್ ಅವರು ಅದೇ ಸೂಪರ್ ಮಾರ್ಟಿನ ಮಹಿಳಾ ಸಿಬ್ಬಂದಿಯನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಯವತಿಯನ್ನು ಕರೆದೊಯ್ದ ಕಾರಣ ಪೊಲೀಸರು ಶಾಹಿದ್ ಖಾನ್ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ.
ಭಟ್ಕಳದ ಕಾರಗದ್ದೆ ಎರಡನೇ ಕ್ರಾಸಿನಲ್ಲಿ ಶಾಹಿದ್ ಸೈಫ್ ಖಾನ್ ಅವರು ವಾಸವಾಗಿದ್ದಾರೆ. 21 ವರ್ಷದ ಅವರು ಇಲ್ಲಿನ ಸೂಪರ್ ಮಾರ್ಟವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ಸೂಪರ್ ಮಾರ್ಟಿನಲ್ಲಿ ಹಿಂದೂ ಯುವತಿಯೊಬ್ಬರು ಕೆಲಸಕ್ಕಿದ್ದು, ಕಳೆದ ಕೆಲ ದಿನಗಳಿಂದ ಶಾಹಿದ್ ಖಾನ್ ಆ ಯುವತಿಯ ಬೆನ್ನು ಬಿದ್ದಿದ್ದಾರೆ. ಯವತಿಯ ಇಚ್ಚೆಗೆ ವಿರುದ್ಧವಾಗಿ ಆಕೆಯನ್ನು ಬಲವಂತ ಮಾಡುತ್ತಿದ್ದಾರೆ.
ಪದೇ ಪದೇ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಶಾಹಿದ್ ಖಾನ್ ಜೂನ್ 17ರಂದು ಆ ಯುವತಿಗೆ ಫೋನ್ ಮಾಡಿದ್ದಾರೆ. ಅನ್ಫಾಲ್ ಸುಪರ್ ಮಾರುಕಟ್ಟೆ ಹಿಂಬಾಗದ ಹಾಸ್ಟೆಲ್ ಹತ್ತಿರ ಬಂದ ಶಾಹಿದ್ ಖಾನ್ ಅಲ್ಲಿಗೆ ಆಗಮಿಸುವಂತೆ ಯುವತಿಯನ್ನು ಆಮಂತ್ರಿಸಿದ್ದಾರೆ. ಆ ಯುವತಿ ಅಲ್ಲಿ ಬಂದಾಗ ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಹತ್ತಿಸಿಕೊಂಡಿದ್ದು, ಜೋರಾಗಿ ಆ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಆ ಕಾರು ಮಾರುಕೇರಿ ಕಡೆ ಹೊರಟಿದೆ. ವೇಗವಾಗಿ ಬರುತ್ತಿದ್ದ ಕಾರನ್ನು ನೋಡಿದ ಪೊಲೀಸರು ಕಡಸಲಗದ್ದೆ ಪುರಸಭೆ ಕಸ ವಿಲೇವಾರಿ ಘಟಕದ ಹತ್ತಿರ ಕಾರು ತಡೆದಿದ್ದಾರೆ. ಆ ವೇಳೆ ಯುವತಿ ತನ್ನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಕಿರುಕುಳ ನೀಡಿದ ಬಗ್ಗೆ ದೂರಿದ್ದು, ಪೊಲೀಸರು ಶಾಹಿದ್ ಖಾನ್ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಸದ್ಯ ಶಾಹಿದ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಷಯವಾಗಿ ಅನೇಕರು ಪೊಲೀಸ್ ಠಾಣೆ ಬಳಿ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೊರಟ ಬಗ್ಗೆ ದೂರಲಾಗಿದೆ.