ಶಿರಸಿಯಲ್ಲಿ ರಸ್ತೆ ಡಿವೈಡರ್‌ಗೆ ರಿಕ್ಷಾ ಗುದ್ದಿದ್ದು, ರಿಕ್ಷಾ ಪಲ್ಟಿಯಾದ ರಭಸಕ್ಕೆ ಚಾಲಕ ಸಾವನಪ್ಪಿದ್ದಾರೆ. ಆವೆ ಮರಿಯಾ ಶಾಲೆಯ ಎದುರುಗಡೆ ಈ ಅಪಘಾತ ನಡೆದಿದೆ.
ಗಣೇಶ ನಗರದ ನಿವಾಸಿ ಮಹೇಶ ಗಾಂವ್ಕರ್ (31) ಶನಿವಾರ ರಾತ್ರಿ ಶಿರಸಿ ನಗರದಲ್ಲಿ ರಿಕ್ಷಾ ಓಡಿಸುತ್ತಿದ್ದರು. ಆವೆ ಮರಿಯಾ ಶಾಲೆಯ ಎದುರುಗಡೆ ಆ ರಿಕ್ಷಾ ನಿಯಂತ್ರಣ ತಪ್ಪಿತು. ರಿಕ್ಷಾ ಪಲ್ಟಿಯದ ಕಾರಣ ಅವರು ತಿರುಗಿ ಬಿದ್ದು ತಲೆ ಒಡೆದುಕೊಂಡರು. ರಿಕ್ಷಾ ರಸ್ತೆ ಮಧ್ಯದ ಡಿವೈಡರ್‌ಗೆ ಜೋರಾಗಿ ಅಪ್ಪಳಿಸಿದ ರಭಸಕ್ಕೆ ಅವರು ಅಲ್ಲಿಯೇ ಸಾವನಪ್ಪಿದರು.
ಘಟನಾ ಸ್ಥಳಕ್ಕೆ ಶಿರಸಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ದೇವೇಂದ್ರ ನಾಯ್ಕ್ ಹಾಗೂ ಸಿಬ್ಬಂದಿ ತಕ್ಷಣವೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಅಪಘಾತಕ್ಕೀಡಾದ ವಾಹನವನ್ನು ತೆರವುಗೊಳಿಸಿದ್ದಾರೆ. ಸ್ಥಳದಲ್ಲಿ ಜನ ಜಮಾಯಿಸಿದ್ದು, ಸಂಚಾರ ದಟ್ಟಣೆ ಆಗದ ಹಾಗೇ ನೋಡಿಕೊಂಡಿದ್ದಾರೆ. ಪೊಲೀಸ್ ಪ್ರಕರಣವೂ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.