27 ವರ್ಷಗಳಿಂದ ಶಿಕ್ಷಕರಾಗಿ ಮಕ್ಕಳ ವಿದ್ಯಾರ್ಜನೆಗೆ ಸಹಕರಿಸುತ್ತಿರುವ ಕಾರವಾರದ ಜೈರಂಗನಾಥ ಬಿ ಎಸ್ ಅವರಿಗೆ `ಸಂಪೂರ್ಣ ರತ್ನ’ ಪ್ರಶಸ್ತಿ ಸಿಕ್ಕಿದೆ.
ಧಾರವಾಡದ ರಂಗಾಯಣ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರಶೆಟ್ಟಿಕೊಪ್ಪದ ಲಡ್ಡು ಮುತ್ಯ ಆಶ್ರಮ ಲಡ್ಡು ಮುತ್ಯ ಶ್ರೀಗಳು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಉದ್ಯಮಿ ಸಂತೋಷ್ ವರ್ಣೇಕರ್, ಸಮಾಜ ಸೇವಕ ಈಶ್ವರ್ ಗೌಡ ಪಾಟೀಲ್, ಪತ್ರಿಕೋದ್ಯಮಿ ಶಿವಾನಂದ್ ಬಿವಿ ಅವರು ಇದೇ ವೇದಿಕೆಯಲ್ಲಿ 20 ಸಾಧಕರಿಗೆ ಗೌರವಿಸಿದ್ದಾರೆ.
ಜೈರಂಗನಾಥ ಬಿ ಎಸ್ ಅವರು ಕಾರವಾರ ತಾಲೂಕಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರಾಗಿದ್ದಾರೆ. ವಿವಿಧ ಸಂಘಟನೆಗಳ ಮೂಲಕ ಅವರು ಸಮಾಜಮುಖಿ ಕೆಲಸ ಮಾಡುತ್ತಿದ್ದರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ವೈಜ್ಞಾನಿಕ ಚಿಂತನೆ ಮೂಡಿಸುವಲ್ಲಿ ಅವರು ಶ್ರಮಿಸುತ್ತಿದ್ದಾರೆ.
ಅವರ ಈ ಎಲ್ಲಾ ಸೇವೆ ಗಮನಿಸಿ ಬೆಂಗಳೂರಿನ ಕರುನಾಡು ಹೊಸ ಬೆಳಕು ಸಮಿತಿ ಹಾಗೂ ಸಂಪೂರ್ಣ ವಾರ್ತೆ ಸುದ್ದಿ ವಾಹಿನಿ ಈ ಪ್ರಶಸ್ತಿ ನೀಡಿ ಗೌರವಿಸಿದೆ.