ಎಲ್ಲಾ ರಾಜಕೀಯ ಪಕ್ಷದ ಮುಖ್ಯಸ್ಥರ ಜೊತೆ ಮಂಗಳವಾರ ಡೀಸಿ ಕೆ ಲಕ್ಷ್ಮೀಪ್ರಿಯಾ ಅವರು ಸಭೆ ನಡೆಸಿದ್ದು, ಈ ಸಭೆಯಲ್ಲಿ SIR ಪ್ರಕ್ರಿಯೆಯ ಬಗ್ಗೆ ಅವರು ಮಾತನಾಡಿದ್ದಾರೆ. `ಸೆಪ್ಟೆಂಬರ್ ಅಂತ್ಯದ ಒಳಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕ್ಕರಣೆಯ ಮ್ಯಾಪಿಂಗ್ ಆಗದಿರುವ ಹಾಗೂ ತಾರ್ಕಿಕ ವ್ಯತ್ಯಾಸ ಹೊಂದಿರುವ ಪ್ರಕರಣಗಳ ಮೊದಲ ನೋಟಿಸ್ ವಿಚಾರಣೆ ಪೂರ್ಣಗೊಳ್ಳಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
`ಮ್ಯಾಪಿಂಗ್ ಆಗದಿರುವ ಹಾಗೂ ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಒಟ್ಟು 65,248 ಪ್ರಕರಣಗಳಲ್ಲಿ, ಈಗಾಗಲೇ 64,749 ನೋಟಿಸ್‌ಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ ಇದುವರೆಗೆ 39,804 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. 24,945 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ಸೆಪ್ಟಂಬರ್ ಅಂತ್ಯದೊಳಗೆ ಇವುಗಳ ವಿಚಾರಣೆ ಪೂರ್ಣಗೊಳಿಸಲಾಗುತ್ತದೆ’ ಎಂದವರು ಹೇಳಿದ್ದಾರೆ. `ಮರಣ ಹೊಂದಿರುವ ಅಥವಾ ದ್ವಿ-ನೋಂದಣಿ ಹೊಂದಿರುವ 85 ಪ್ರಕರಣಗಳು ಪತ್ತೆಯಾಗಿ’ ಎಂದವರು ಮಾಹಿತಿ ನೀಡಿದ್ದಾರೆ.
`ಹಳಿಯಾಳ ಕ್ಷೇತ್ರದಲ್ಲಿ 14,012 ನೋಟಿಸ್‌ಗಳಲ್ಲಿ 8,907 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಕಾರವಾರದಲ್ಲಿ 10,446 ನೋಟಿಸ್‌ಗಳಲ್ಲಿ 5881 ಪ್ರಕರಣ, ಕುಮಟಾದಲ್ಲಿ 8,344 ನೋಟಿಸ್‌ಗಳಲ್ಲಿ 4984 ಪ್ರಕರಣ, ಭಟ್ಕಳದಲ್ಲಿ 13,660 ನೋಟಿಸ್‌ಗಳಲ್ಲಿ 6889 ಪ್ರಕರಣ, ಶಿರಸಿಯಲ್ಲಿ 8,821 ನೋಟಿಸ್‌ಗಳಲ್ಲಿ 5428 ಪ್ರಕರಣ, ಯಲ್ಲಾಪುರದಲ್ಲಿ 9,965 ನೋಟಿಸ್‌ಗಳಲ್ಲಿ 7715 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿವೆ’ ಎಂದವರು ತಿಳಿಸಿದ್ದಾರೆ. `ಚುನಾವಣಾ ಆಯೋಗದ ನಿರ್ದೇಶನದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆ.23 ಕೊನೆಯ ದಿನಾಂಕವಾಗಿದು,್ದ ಅಂತಿಮ ಮತದಾರರ ಪಟ್ಟಿ ಅ 27ರಂದು ಪ್ರಕಟವಾಗಲಿದೆ’ ಎಂದವರು ಹೇಳಿದ್ದಾರೆ.
`ಸೆ 19 ಮತ್ತು 20ರಂದು ನಡೆದ ಮತದಾರರ ವಿಶೇಷ ಆಂದೋಲನದಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು 2613 ಅರ್ಜಿಗಳು, ಆಕ್ಷೇಪಣೆಗಾಗಿ 89 ಮತ್ತು ತಿದ್ದುಪಡಿಗಾಗಿ 1395 ಅರ್ಜಿಗಳನ್ನು ಸ್ವೀಕರಿಸಲಾಗಿದೆ’ ಎಂದರು. `ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಒಟ್ಟು 23 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 15732 ಮತದಾರರು ನೋಂದಣಿಯಾಗಿದ್ದಾರೆ, ಹೊಸದಾಗಿ ಸೇರ್ಪಡೆಗೆ ಬಯಸುವÀ ಮತದಾರರು ನಮೂನೆ-18ರಲ್ಲಿ ಅರ್ಜಿಗಳನ್ನು ಜಿಲ್ಲೆಯ ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಬಹುದು’ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಸಂಜಯ್ ಸಾಲುಂಕೆ, ಜೆ.ಡಿ.ಎಸ್. ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಕಾಂಗ್ರೆಸ್ ಪಕ್ಷದ ತಾಲೂಕು ಉಪಾಧ್ಯಕ್ಷ ಬಾಬು ಶೇಖ್, ಬ್ಲಾಕ್ ಅಧ್ಯಕ್ಷ ಅರವಿಂದ ಕಲಗುಟ್ಕರ್ ಹಾಗೂ ಚುನಾವಣಾ ಶಾಖೆಯ ತಹಸೀಲ್ದಾರ್ ಪ್ರಮೋದ್ ನಾಯ್ಕ ಇದ್ದರು.