ಆರು ತಿಂಗಳ ಬೆನ್ನು ನೋವು ಹಾಗೂ ಮೂರು ತಿಂಗಳ ಜಾಂಡಿಸ್ ಸಹಿಸಿಕೊಳ್ಳಲಾಗದ ಸಿದ್ದಾಪುರದ ಕೃಷಿಕ ಕಿರಣಕುಮಾರ ಆಲಳ್ಳಿಮಠ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆನಾಶಕ ಸೇವಿಸಿ ಒದ್ದಾಡುತ್ತಿದ್ದ ಅವರನ್ನು ಎರಡು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ಸಿದ್ದಾಪುರದ ಇಟಗಿಯ ಕಿರಣಕುಮಾರ ಆಲಳ್ಳಿಮಠ ಅವರು ಉತ್ತಮ ಕೃಷಿಕರಾಗಿದ್ದರು. ಆದರೆ, ಆರು ತಿಂಗಳ ಹಿಂದೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತು. ಸಿದ್ದಾಪುರ, ಶಿವಮೊಗ್ಗ, ಮಂಗಳೂರು ಸೇರಿ ವಿವಿಧ ಕಡೆ ಅವರು ಚಿಕಿತ್ಸೆಪಡೆದರು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ.
ಮೂರು ತಿಂಗಳ ಹಿಂದೆ ಕಿರಣಕುಮಾರ ಆಲಳ್ಳಿಮಠ ಅವರಿಗೆ ಬಿಳಿ ಜಾಂಡಿಸ್ ಕಾಡಿತು. ಆಗಲೂ ಅವರು ಸಿದ್ದಾಪುರ, ಸಾಗರ ಮಂಗಳೂರು ಆಸ್ಪತ್ರೆ ಅಲೆದಾಟ ಮಾಡಿದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗದ ಕಾರಣ ಅಕ್ಟೊಬರ್ 19ರಂದು ತೋಟಕ್ಕೆ ಹೋಗಿ ಕಳೆನಾಶಕ ಸೇವಿಸಿದರು. ಅಸ್ವಸ್ಥಗೊಂಡ ಅವರನ್ನು ಸಾಗರದ ಸಮುಖ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಅಕ್ಟೊಬರ್ 20ರಂದು ಮಂಗಳೂರಿನ ಎಜೆ ಆಸ್ಪತ್ರೆ ಸಾಗಿಸಲಾಯಿತು. ಆದರೆ, ಈ ಎರಡೂ ಆಸ್ಪತ್ರೆಯ ಚಿಕಿತ್ಸೆಗೆ ಕಿರಣಕುಮಾರ ಅವರು ಸ್ಪಂದಿಸಲಿಲ್ಲ. ಅಕ್ಟೊಬರ್ 23ರಂದು ಅವರು ಸಾವನಪ್ಪಿದರು. ಕಿರಣಕುಮಾರ ಅವರ ತಂದೆ ಮಲ್ಲಿಕಾರ್ಜುನ ಆಲಳ್ಳಿಮಠ ಅವರು ಈ ಬಗ್ಗೆ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.