ಪೀಡ್ಸ ರೋಗವಿದ್ದರೂ ಸರಾಯಿ ಕುಡಿಯುವ ಚಟ ಬಿಡದ ಮುಂಡಗೋಡು ಮೂಲದ ಮೌಲಲಿ ಚಪ್ಪರಬಂದ್ ಅವರು ಶಿರಸಿಯ ವಾನಳ್ಳಿ ಬಳಿ ರಸ್ತೆ ಬದಿಗೆ ಬಿದ್ದು ಸಾವನಪ್ಪಿದ್ದಾರೆ. ಜಟಕಮಕೊಡ್ಲುವಿನಲ್ಲಿ ಬಿದ್ದ ಅವರನ್ನು ಆಸ್ಪತ್ರೆಗೆ ತಂದರೂ ಪ್ರಯೋಜನವಾಗಲಿಲ್ಲ.
ಮುಂಡಗೋಡು ಕಾತೂರು ನಂದಿಪುರದ ಮೌಲಲಿ ಚಪ್ಪರಬಂದ್ (42) ಅವರು ಕೆಲ ವರ್ಷಗಳಿಂದ ಶಿರಸಿಯಲ್ಲಿ ವಾಸವಾಗಿದ್ದರು. ಶಿರಸಿಯ ಬಾರಗದ್ದೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಪಿಡ್ಸ ರೋಗ ಕಾಣಿಸಿದ್ದು, ಅದಾದ ನಂತರ ಕುಡಿತದ ಚಟ ಇನ್ನಷ್ಟು ಏರಿಕೆಯಾಗಿತ್ತು. ಮದ್ಯಪಾನ ಒಳ್ಳೆಯದಲ್ಲ ಎಂದರೂ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ.
ಅಕ್ಟೊಬರ್ 8ರ ಸಂಜೆ ಮೌಲಲಿ ಚಪ್ಪರಬಂದ್ ಅವರು ವಾನಳ್ಳಿಯ ಜಟಕಕೊಡ್ಲುವಿನಲ್ಲಿ ಬಿದ್ದಿದ್ದರು. ಅದನ್ನು ನೋಡಿದ ಅವರ ಪತ್ನಿ ರಮೇಜಾ ಮೌಲಾಲಿ ಅವರು ಮೌಲಲಿ ಚಪ್ಪರಬಂದ್ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದರು. ಆದರೆ, ಆಸ್ಪತ್ರೆಗೆ ಸೇರಿಸಲು ರಾತ್ರಿ 8 ಗಂಟೆ ಆಗಿದ್ದು, ಅಷ್ಟರೊಳಗೆ ಮೌಲಲಿ ಚಪ್ಪರಬಂದ್ ಅವರು ಸಾವನಪ್ಪಿದ್ದರು. ರಮೇಜಾ ಮೌಲಾಲಿ ಅವರು ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.