ಮುಂಡಗೋಡದ ಕಲಕೊಪ್ಪ ಕ್ರಾಸಿನ ಬಳಿ ಟಿಪ್ಪರೊಂದು ಬೈಕಿಗೆ ಗುದ್ದಿದೆ. ಈ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸಾವನಪ್ಪಿದ್ದಾರೆ. ಜೊತೆಗೆ ಮತ್ತೊಬ್ಬರಿಗೆ ಗಂಭೀರವಾಗಿ ಗಾಯವಾಗಿದೆ.
ಹಾನಗಲ್ ತಾಲೂಕಿನ ಕೊಪ್ಪರಿಸಿಕೊಪ್ಪ ಗ್ರಾಮದ ಎಲ್ಲಪ್ಪ ಎಸ್ ಕೊಡದ್ ಅವರು ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ವಿಟ್ಟಲ್ ಎಸ್. ಚೋಳಪ್ಪನವರ್ ಅವರಿಗೆ ಗಾಯವಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಖಲಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ – ಶಿರಸಿ ರಸ್ತೆಯಲ್ಲಿ ಟಿಪ್ಪರ್ ಲಾರಿಗಳ ಸಂಚಾರ ಅತಿಯಾಗಿ ಹೆಚ್ಚಾಗಿರುವುದರಿಂದ ಅಪಘಾತಗಳ ಭೀತಿ ಹೆಚ್ಚುತ್ತಿದೆ. ಶಿರಸಿಯಿಂದ ಹಾನಗಲ್ಲಿಗೆ ಹಾಗೂ ಹಾನಗಲ್ಲಿನಿಂದ ಪಾಳಾ ಮಾರ್ಗವಾಗಿ ಶಿರಸಿಗೆ ಕಲ್ಲು ಗಣಿಗಾರಿಕೆಯಿಂದ ಜೆಲ್ಲಿ ತುಂಬಿಕೊAಡು ಸಾಗುವ ಟಿಪ್ಪರ್ ಲಾರಿಗಳು ಹಗಲು-ರಾತ್ರಿ ಎನ್ನದೆ ವೇಗವಾಗಿ ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ಟಿಪ್ಪರ್‌ಗಳ ಅತಿಯಾದ ಓಡಾಟದಿಂದ ವಾಹನ ಸವಾರರಿಗೆ ಅಪಾಯ ಹೆಚ್ಚಾಗಿದ್ದು, ಸಂಬAಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.