ಬ್ಯಾಟರಿ ಕದ್ದ ಪ್ರಕರಣದಲ್ಲಿ ಪಂಚನಾಮೆ ವೇಳೆ ಕುಮಟಾ ಪೊಲೀಸರ ಬಳಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಭಟ್ಕಳದ ಆಟೋ ಚಾಲಕ ಪೌಜಾನ್ ಅಹ್ಮದ್ ಮತ್ತೆ ಸಿಕ್ಕಿಬಿದ್ದಿದ್ದು, ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಭಟ್ಕಳದ ತಗ್ಗರಗೋಡಿನ ಜಾಲಿ ಬಳಿ ಪೌಜಾನ್ ಅಹ್ಮದ್ ವಾಸವಾಗಿದ್ದರು. ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದ ಅವರಿಗೆ ಕಳ್ಳತನದ ಖಯಾಲಿ ಜೋರಾಗಿತ್ತು. ವಿವಿಧ ಮನೆ, ಮಳಿಗೆಗಳಿಗೆ ಪೌಜಾನ್ ಅಹ್ಮದ್ ಕನ್ನ ಹಾಕಿದ್ದರು. ಅದರಂತೆ ಅಕ್ಟೊಬರ್ 8ರಂದು ತಮ್ಮ ಸಹಚರರ ಜೊತೆ ಸೇರಿ ಕುಮಟಾದ
ಕುಮಟಾದ ಗಿಬ್ ಸರ್ಕಲ್ ಬಳಿಯ ಅಮರಾನ್ ಬ್ಯಾಟರಿ ಶಾಪ್‌ನಲ್ಲಿ 8 ಸಾವಿರ ರೂ ಮೌಲ್ಯದ 12 ಬ್ಯಾಟರಿ ಕಳ್ಳತನ ಮಾಡಿದ್ದರು.
ಕಳ್ಳತನ ಪ್ರಕರಣ ದಾಖಲಿಸಿದ ಪೊಲೀಸರು ಪೌಜಾನ್ ಅಹ್ಮದ್ ಅವರನ್ನು ಬಂಧಿಸಿದ್ದರು. ಅದರೊಂದಿಗೆ ಭಟ್ಕಳ ಗುಳ್ಮೆಯ ಟೈಲ್ಸ ಕಾರ್ಮಿಕ ಮಹಮೊದ್ ಸುಫಿಯಾನ್ ಸಹ ಸಿಕ್ಕಿಬಿದ್ದಿದ್ದರು. ಪಂಚನಾಮೆ ವೇಳೆ ಪೌಜಾನ್ ಅಹ್ಮದ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಮತ್ತೆ ಹುಡುಕಾಟ ನಡೆಸಿದ ಪೊಲೀಸರು ಮಂಡ್ಯದ ಬಳಿ ಪೌಜಾನ್ ಅಹ್ಮದ್ ಅವರನ್ನು ಬಂಧಿಸಿದರು.
ಬAಧನದ ವೇಳೆ ಪೌಜಾನ್ ಅಹ್ಮದ್ ಬಳಿ ಕಾರೊಂದು ಸಿಕ್ಕಿದೆ. ಆ ಕಾರು ಸಹ ಕಳ್ಳತನ ಮಾಡಿದ ಬಗ್ಗೆ ಮಾಹಿತಿ ಲಭಿಸಿದೆ. ಈ ಇಬ್ಬರು ಆರೋಪಿತರ ವಿರುದ್ಧ ಬೈಂದೂರು, ಗಂಗೊಳ್ಳಿ, ಭಟ್ಕಳದಲ್ಲಿ ಸಹ ಕಳ್ಳತನ ಪ್ರಕರಣಗಳಿವೆ.