ಕಾರವಾರದ ನಿವೃತ್ತ ನೌಕರ ವಿಠ್ಠಲ ನಾಯ್ಕ ಅವರ ಮೇಲೆ ಹಲ್ಲೆ ನಡೆದಿದೆ. ರಸ್ತೆ ಮೇಲೆ ನಿಂತ ಕಾರನ್ನು ಬೇರೆಡೆ ನಿಲ್ಲಿಸುವಂತೆ ಸೂಚಿಸಿದ ಕಾರಣ ಅರುಣ ನಾಯ್ಕ ಅವರು ವಿಠ್ಠಲ ನಾಯ್ಕ ಅವರಿಗೆ ಹೊಡೆದಿದ್ದಾರೆ.
ಕಾರವಾರದ ಸಂಕ್ರಿವಾಡ ವಿಠ್ಠಲ ಸೀತಾರಾಮ ನಾಯ್ಕ (64) ಅವರು ವಾಸವಾಗಿದ್ದಾರೆ. ಅಕ್ಟೊಬರ್ 24ರಂದು ರಾತ್ರಿ ಅವರು ಸಂಕ್ರಿವಾಡ ರಸ್ತೆ ಮೇಲೆ ಬರುತ್ತಿದ್ದಾಗ ರಸ್ತೆ ಮೇಲೆ ಕಾರು ನಿಂತಿರುವುದನ್ನು ನೋಡಿದರು. ಅಲ್ಲಿದ್ದ ಅರುಣ ಬಾಬುರಾಯ ನಾಯ್ಕ ಅವರಿಗೆ ಕಾರನ್ನು ಬೇರೆ ಕಡೆ ನಿಲ್ಲಿಸುವಂತೆ ಸೂಚಿಸಿದರು. ಆಗ, ಅರುಣ ನಾಯ್ಕ ಅವರು ಸುರೇಶ ಬಾಬುರಾಯ ನಾಯ್ಕ ಅವರ ಬಳಿ ಈ ವಿಷಯ ತಿಳಿಸುವಂತೆ ಹೇಳಿದರು.
ವಿಠ್ಠಲ ನಾಯ್ಕ ಅವರು `ರಸ್ತೆ ಮೇಲಿರುವ ಕಾರು ತೆಗೆಯಿರಿ’ ಎಂದು ಸುರೇಶ ನಾಯ್ಕ ಅವರಿಗೆ ಹೇಳಿದರು. ಆಗ, ಸುರೇಶ ನಾಯ್ಕ ಅವರು `ನನಗೆ ಅದಕ್ಕೆ ಸಂಬAಧವಿಲ್ಲ’ ಎಂದು ಹೇಳಿದರು. ಇದರಿಂದ ಸಿಟ್ಟಾದ ವಿಠ್ಠಲ ನಾಯ್ಕ ಅವರು `ಇಲ್ಲಿ ಏನಾದರೂ ಆದರೆ ನೀವೇ ಹೊಣೆ’ ಎಂದು ಕೂಗಿದರು. ಆಗ, ಏಕಾಏಕಿ ಅರುಣ ನಾಯ್ಕ ಅವರು ರೊಚ್ಚಿಗೆದ್ದು ವಿಠ್ಠಲ ನಾಯ್ಕ ಅವರ ಮುಖಕ್ಕೆ ಗುದ್ದಿದರು.
ಇದರಿಂದ ವಿಠ್ಠಲ ನಾಯ್ಕ ಅವರ ಕಣ್ಣಿಗೆ ಗಾಯವಾಯಿತು. ಅದಾಗಿಯೂ ಬಿಡದ ಅರುಣ ನಾಯ್ಕ ಅವರು ವಿಠ್ಠಲ ನಾಯ್ಕ ಅವರನ್ನು ನೆಲಕ್ಕೆ ದೂಡಿ ನೋವು ಮಾಡಿದರು. ಕಾರವಾರ ಆಸ್ಪತ್ರೆ ಸೇರಿದ ವಿಠ್ಠಲ ನಾಯ್ಕ ಅವರು ಅಲ್ಲಿ ಚಿಕಿತ್ಸೆಪಡೆದಿದ್ದು, ತಮಗಾದ ಅನ್ಯಾಯದ ವಿರುದ್ಧ ಪೊಲೀಸ್ ದೂರು ನೀಡಿದರು. ಕಾರವಾರ ಶಹರ ಠಾಣೆ ಪೊಲೀಸರು ಅರುಣ ನಾಯ್ಕ ಹಾಗೂ ವಿಠ್ಠಲ ನಾಯ್ಕ ಅವರ ವಿರುದ್ಧ ಪ್ರಕರಣ ದಾಖಲಿಸಿದರು.