ಫೇಸ್ಬುಕ್ ಹಾಗೂ ಇನಸ್ಟಾಗ್ರಾಂ ಮೂಲಕ ಪರಿಚಿತರಾದ ಮೂವರು ಹೊನ್ನಾವರದ ಬಾಲಕಿಯನ್ನು ಫುಸಲಾಯಿಸಿ ಆಕೆಯನ್ನು ಅಮಾನವೀಯ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ದೈಹಿಕ ಸಂಪರ್ಕಕ್ಕೆ ಒಳಗಾದ ಬಾಲಕಿ ಗರ್ಭಿಣಿಯಾಗಿದ್ದು, ಆ ಮೂವರನ್ನು ಪೊಲೀಸರು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ.
ಬಾಲಕಿಯೊಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಹೊನ್ನಾವರದ ಮಾವಿನಕೂರ್ವಾದ ಅಭಿ ಗೌಡ (22) ಕವಲಕ್ಕಿಯ ಹೇಮಂತ ನಾಯ್ಕ (21) ಹಾಗೂ ಗೇರುಸೊಪ್ಪ ಮೂಲದ ಸದ್ಯ ಇಡಗುಂಜಿಯಲ್ಲಿ ವಾಸವಿರುವ ದೇವೇಂದ್ರ ನಾಯ್ಕ (26) ಪರಿಚಯವಾಗಿದೆ. ಎರಡು ತಿಂಗಳ ಹಿಂದೆ ಪರಿಚಿತರಾದ ಸ್ನೇಹಿತರ ಜೊತೆ ಬಾಲಕಿ ಅಲ್ಲಿ-ಇಲ್ಲಿ ಸುತ್ತಾಟ ಮಾಡಿದ್ದು, ಅಭಿ ಗೌಡ ಅವರು ಬಾಲಕಿಯನ್ನು ತಮ್ಮ ಕಾರಿನಲ್ಲಿ ಕರೆದೊಯ್ದಿದ್ದಾರೆ. ಅಭಿ ಗೌಡ ಅವರು ಬಾಲಕಿಯನ್ನು ಮೊದಲು ದೈಹಿಕವಾಗಿ ಬಳಸಿಕೊಂಡಿದ್ದಾರೆ.
ನoತರ ಹೇಮಂತ ನಾಯ್ಕ ಅವರು ಬಾಲಕಿಯನ್ನು ಮುರ್ಡೇಶ್ವರದ ಲಾಡ್ಜ್’ಗೆ ಕರೆದೊಯ್ದು ಅನಾಚಾರ ಮಾಡಿದ್ದು, ಇದೇ ವೇಳೆ ದೇವೇಂದ್ರ ನಾಯ್ಕ ಸಹ ಬಾಲಕಿಯ ಜೊತೆ ಸರಸವಾಡಿದ ಬಗ್ಗೆ ದೂರಲಾಗಿದೆ. ಅದಾದ ನಂತ ಇಕೋ ಬೀಚ್‌ನಲ್ಲಿ ಅಪ್ರಾಪ್ತೆ ಜೊತೆ ಆರೋಪಿತರು ದೈಹಿಕ ಸಂಪರ್ಕ ನಡೆಸಿದ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಕೆಲವು ದಿನಗಳ ಹಿಂದೆ ಅಪ್ರಾಪ್ತೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಆ ವೇಳೆ ಬಾಲಕಿ ತಾಯಿ ಜೊತೆ ವೈದ್ಯಕೀಯ ಪರೀಕ್ಷೆಗೆ ಹೋದಾಗ ಗರ್ಭಧಾರಣೆಯಾಗಿರುವುದು ದೃಢಪಟ್ಟಿದೆ. ವಿಚಾರಣೆ ವೇಳೆ ಅಪ್ರಾಪ್ತೆಯು ಮೂವರು ನಡೆಸಿದ ಕಾಮದಾಟದ ಬಗ್ಗೆ ಹೇಳಿಕೆ ನೀಡಿದ್ದು, ಅದೇ ಆಧಾರದಲ್ಲಿ ಪೊಲೀಸರು ಪೊಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.