ಶಿರಸಿ ಹಾಗೂ ಯಲ್ಲಾಪುರದಲ್ಲಿ ದೀಪಾವಳಿ ಅಂಗವಾಗಿ ಜೂಜಾಟ ನಡೆಸಿದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ದಾಳಿಯ ವೇಳೆ ಕೆಲವರು ಸಿಕ್ಕಿಬಿದ್ದಿದ್ದು, ಇನ್ನೂ ಕೆಲವರು ಓಡಿ ಪರಾರಿಯಾಗಿದ್ದಾರೆ.
ಅಕ್ಟೊಬರ್ 22ರ ಬೆಳಗ್ಗೆ ಯಲ್ಲಾಪುರದ ಹೊಸಳ್ಳಿ ಜನತಾ ಕಾಲೋನಿಯ ರಸ್ತೆ ಅಂಚಿನಲ್ಲಿ ಜನತಾ ಕಾಲೋನಿಯ ವಿನೋದ ಮಾರುತಿ ಚೌಹಾಣ, ಶಿವಾಜಿ ಸೋಮಣ್ಣ ಕಾಂಬಳೆ, ಮೌಲಾಲಿ ಮಹಮದಸಾಬ್ ಸಯ್ಯದ್, ಶಿವರಾಯ ಬಸಪ್ಪ ಕಿಲಾರಿ ಅವರ ಜೊತೆ ಗೌಳಿವಾಡದ ಬೀರು ಸಾವು ಪಟಗಾರೆ ಅವರು ಜೂಜಾಟದಲ್ಲಿ ತೊಡಗಿದ್ದರು. ಪಿಎಸ್‌ಐ ರಾಜಶೇಖರ ವಂದಲಿ ದಾಳಿ ತಮ್ಮ ತಂಡದೊoದಿಗೆ ಅಲ್ಲಿ ದಾಳಿ ಮಾಡಿದ್ದು, ಆಗ 4 ಜನ ಸಿಕ್ಕಿ ಬಿದ್ದರು. ಸಿಕ್ಕಿಬಿದ್ದವರ ಬಳಿಯಿದ್ದ 3630ರೂ ಹಣ, ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆಪಡೆದರು. ಶಿವರಾಯ ಬಸಪ್ಪ ಕಿಲಾರಿ ಹಾಗೂ ಗೌಳಿವಾಡದ ಬೀರು ಸಾವು ಪಟಗಾರೆ ಓಡಿಹೋದರೂ ಅವರ ಹೆಸರು ಸೇರಿಸಿ ಕಾನೂನು ಕ್ರಮ ಜರುಗಿಸಿದರು.
ಯಲ್ಲಾಪುರ ಪಟ್ಟಣದ ರವೀಂದ್ರ ನಗರ ಬಳಿಯ ಚೌಡೇಶ್ವರಿ ದೇವಾಲಯದ ಹತ್ತಿರ ಅಕ್ಟೊಬರ್ 22ರ ನಸುಕಿನಲ್ಲಿ ಜೂಜಾಟ ನಡೆಯುತ್ತಿತ್ತು. ರವೀಂದ್ರ ನಗರದ ಚಾಲಕ ಸಂತೋಷ ಸತ್ಯಪ್ಪ ಬೋವಿವಡ್ಡರ್, ಗೌಂಡಿ ಕೆಲಸ ಮಾಡುವ ಗಿರೀಶ ದುರ್ಗಪ್ಪ ಬೋವಿವಡ್ಡರ್, ಕಾರ್ಪರೆಂಟರ್ ಲಕ್ಷ್ಮಣ ಮಹೇಶ ಮರಾಠಿ, ಗುರುರಾಜ ಹನುಮಂತಪ್ಪ ಬೋವಿವಡ್ಡರ್, ಪರಶುರಾಮ ಶಿವಪ್ಪ ಬೋವಿವಡ್ಡರ್, ಶಿವಪ್ಪ ಬೋವಿವಡ್ಡರ್, ಸಿದ್ದು ಯಮಕರ ಗೌಳಿ, ಸಾಗರ ಮಹೇಶ ನಾಯ್ಕ ಹಾಗೂ ಮುಟಿಗಪ್ಪ ಬೋವಿವಡ್ಡರ್ ಅಲ್ಲಿ ಅಂದರ್ ಬಾಹರ್ ಆಟದಲ್ಲಿ ತಲ್ಲೀನರಾಗಿದ್ದರು.
ಪಿಎಸ್‌ಐ ಸಿದ್ದಪ್ಪ ಗುಡಿ ಅವರು ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದರು. ಆಗ, ಗುರುರಾಜ ಹನುಮಂತಪ್ಪ ಬೋವಿವಡ್ಡರ್, ಪರಶುರಾಮ ಶಿವಪ್ಪ ಬೋವಿವಡ್ಡರ್, ಶಿವಪ್ಪ ಬೋವಿವಡ್ಡರ್, ಸಿದ್ದು ಯಮಕರ ಗೌಳಿ, ಸಾಗರ ಮಹೇಶ ನಾಯ್ಕ ಹಾಗೂ ಮುಟಿಗಪ್ಪ ಬೋವಿವಡ್ಡರ್ ಓಡಿ ಪರಾರಿಯಾದರು. ಸಂತೋಷ ಸತ್ಯಪ್ಪ ಬೋವಿವಡ್ಡರ್, ಗಿರೀಶ ದುರ್ಗಪ್ಪ ಬೋವಿವಡ್ಡರ್, ಲಕ್ಷö್ಮಣ ಮಹೇಶ ಮರಾಠಿ ಮಾತ್ರ ಸಿಕ್ಕಿಬಿದ್ದರು. ಅವರ ಬಳಿಯಿದ್ದ 1220ರೂ ಹಣದ ಜೊತೆ ಇಸ್ಪಿಟ್ ಎಲೆ ಜೊತೆಯಿದ್ದ 3220ರೂ ಹಣವನ್ನು ಪೊಲೀಸರು ಜಪ್ತು ಮಾಡಿದರು. ಓಡಿ ಹೋದವರ ಹೆಸರನ್ನು ನಮೂದಿಸಿ ಪ್ರಕರಣ ದಾಖಲಿಸಿದರು.
ಶಿರಸಿಯ ಮಾರಿಕಾಂಬಾ ಕ್ರೀಡಾಂಗಣ ಎದುರು ಅಕ್ಟೊಬರ್ 21ರ ರಾತ್ರಿ ಅಂದರ್ ಬಾಹರ್ ಆಟ ಜೋರಾಗಿತ್ತು. ಪಿಎಸ್‌ಐ ಬಸವರಾಜ ಕನಶೆಟ್ಟಿ ಅಲ್ಲಿ ತಮ್ಮ ತಂಡದ ಜೊತೆ ಹೋಗಿ ನಾಲ್ವರನ್ನು ವಶಕ್ಕೆಪಡೆದರು. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಇಂದಿರಾನಗರದ ಮಹಮದ್ ಅನ್ವರ್ ಅಬ್ದುಲ್ ಗಫರ್ ಮುನಿಯಾರ್, ಮಹಾಲಕ್ಷಿ ಲೇಔಟಿನ ನೂರಸಾಬ್ ರಾಜಸಾಬ್ ಬೆಲೇರಿ, ವಿವೇಕಾನಂದ ನಗರದ ರಾಮು ಶಿವಪ್ಪ ಮಾನೆನ್ನವರ್ ಜೊತೆ ಶಾಂತಿ ನಗರದ ದಿನೇಶ ಈರಪ್ಪ ಗೌಳಿ ಸಿಕ್ಕಿಬಿದ್ದರು. ಅವರ ಬಳಿಯಿದ್ದ 3600ರೂ ಹಣದ ಜೊತೆ ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.
`ಜೂಜಾಟದಿಂದ ಜೀವನ ಹಾಳು’