ಅರಣ್ಯ ಅತಿಕ್ರಮಣದಾರರ ಮೇಲ್ಮನವಿ ವಿಷಯವಾಗಿ ಶನಿವಾರ ಶಿರಸಿಯಲ್ಲಿ 20 ಸಾವಿರಕ್ಕೂ ಅಧಿಕ ಅರ್ಜಿಗಳು ಅರಣ್ಯ ಇಲಾಖೆಯ ಕಡತ ಸೇರಿವೆ. ಉತ್ತರ ಕನ್ನಡ ಜಿಲ್ಲೆಯ ನಾನಾ ಭಾಗಗಳಿಂದ ಬಂದ ಅರಣ್ಯ ಅತಿಕ್ರಮಣದಾರರ ಆತಂಕದಿoದಲೇ ತಮ್ಮ ಮೇಲ್ಮನವಿ ಸಲ್ಲಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾಡಿದ ಎಡವಟ್ಟಿನಿಂದಾಗಿ ಅರಣ್ಯ ಅತಿಕ್ರಮಣದಾರರು ಹಕ್ಕು ವಂಚಿತರಾಗುವ ಸಾಧ್ಯತೆಯಿದ್ದು, ಇದೇ ಇಂದಿನ ಮುಖ್ಯ ವಿಷಯವಾಗಿತ್ತು. ಅಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಅರಣ್ಯ ಭೂಮಿ ಹಕ್ಕಿನ ವಂಚಿತವಾಗುವ ಭಯದಲ್ಲಿದ್ದರು. ಬುಡಕಟ್ಟು ಜನಾಂಗದವರ ಜೊತೆ ಆದಿವಾಸಿಗಳು, ಕರಾವಳಿಯ ಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿದರು.
`ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸುಪ್ರೀಂ ಕೊರ್ಟನ ನಿರ್ದೇಶನ ಮತ್ತು ಕೇಂದ್ರ ಸರ್ಕಾರದ ಮಾರ್ಗದರ್ಶನದ ವ್ಯತಿರಿಕ್ತವಾಗಿ ಎರಡುವರೇ ಲಕ್ಷಕ್ಕೂ ಮಿಕ್ಕಿ ಅರ್ಜಿಗಳನ್ನ ತಿರಸ್ಕರಿಸಿ ವರದಿ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಖ್ಯ ಕಾರ್ಯದರ್ಶೀಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಈ ವೇಳೆ ಘೋಷಿಸಿದರು.