ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಸ್ಕೂಟರನ್ನು ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳನ ಪತ್ತೆಗೆ ಸಿಸಿ ಕ್ಯಾಮರಾ ಸಹಾಯ ಮಾಡಿದೆ.
ಹಳಿಯಾಳ ಪಟ್ಟಣದ ಎಚ್ ಡಿ ಎಫ್ ಸಿ ಬ್ಯಾಂಕ್ ಎದುರುಗಡೆ ನಿಲ್ಲಿಸಿದ್ದ ಸ್ಕೂಟರ್ ಫೆಬ್ರವರಿ 27ರಂದು ಕಾಣೆಯಾಗಿತ್ತು. ಶಿರಸಿ ಕನವಳ್ಳಿಯ ಖಾಲಿದ್ ಷರೀಪ್ಸಾಬ್ ಕನವಳ್ಳಿ ಅವರು ಸ್ಕೂಟರ್ ಕದ್ದು ಪರಾರಿಯಾಗಿದ್ದರು. ಸಿಸಿ ಕ್ಯಾಮರಾ ಪರಿಶೀಲಿಸಿದ ಪೊಲೀಸರು ಕಳ್ಳನ ಶೋಧ ನಡೆಸಿದರು.
ಆಗ, ಖಾಲಿದ್ ಷರೀಪ್ಸಾಬ್ ಕನವಳ್ಳಿ ಅವರು ಸಿಕ್ಕಿಬಿದ್ದರು. ಕಳ್ಳತನ ಮಾಡಿದ ತಪ್ಪನ್ನು ಕಳ್ಳನೂ ಒಪ್ಪಿಕೊಂಡಿದ್ದು, 1 ಲಕ್ಷ ರೂ ಮೌಲ್ಯದ ಎರಡು ಬೈಕನ್ನು ಪೊಲೀಸರು ಜಪ್ತು ಮಾಡಿದರು. ಈ ಕಳ್ಳನ ವಿರುದ್ಧ ಶಿರಸಿ, ಬನವಾಸಿ, ಯಲ್ಲಾಪುರ, ಕಾರವಾರ, ಕುಮಟಾದಲ್ಲಿಯೂ ಕಳ್ಳತನ ಪ್ರಕರಣಗಳಿವೆ. ಅಲ್ಲಿಯೂ ಕಳ್ಳತನ ಮಾಡಿ ಸಿಕ್ಕಿಬಿದ್ದರೂ ಖಾಲಿದ್ ಷರೀಪ್ಸಾಬ್ ಕನವಳ್ಳಿ ತನ್ನ ಹಳೇ ಚಾಳಿ ಬಿಟ್ಟಿಲ್ಲ.