ಹೊನ್ನಾವರದ ಹಳದಿಪುರ ಗ್ರಾಮ ಪಂಚಾಯತ ಅಧ್ಯಕ್ಷೆ ಪುಷ್ಪಾ ನಾಯ್ಕ ಅವರು ಅಧಿಕಾರದಲ್ಲಿರುವಾಗಲೇ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಅನಾರೋಗ್ಯ ಹಿನ್ನಲೆ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ.
ಪುಷ್ಪಾ ನಾಯ್ಕ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಅವರ ಶ್ರಮಕ್ಕೆ ತಕ್ಕ ಹಾಗೇ ಹಳದಿಪುರ ಗ್ರಾಮ ಪಂಚಾಯತದಲ್ಲಿ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಹಲವು ಜನಪರ ಕೆಲಸಗಳನ್ನು ಅವರು ಮಾಡಿದ್ದರು. ಪುಷ್ಪಾ ನಾಯ್ಕ ಅವರ ಪತಿ ಮಹೇಶ ನಾಯ್ಕ ಅವರು ಕಾಂಗ್ರೆಸ್ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಮಹೇಶ ನಾಯ್ಕ ಅವರು ಸಹ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದರು.
ಅಲ್ಪ ಕಾಲದ ಅನಾರೋಗ್ಯಕ್ಕೆ ಒಳಗಾದ ಪುಷ್ಪಾ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿನ ವೈದ್ಯರು ನಿರಂತರ ಚಿಕಿತ್ಸೆ ನೀಡಿದರು. ಆದರೆ, ಪುಷ್ಪಾ ನಾಯ್ಕ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಶುಕ್ರವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು. ಪುಷ್ಪಾ ನಾಯ್ಕ ಅವರ ದೇಹವನ್ನು ಹಳದಿಪುರ ಗ್ರಾಮ ಪಂಚಾಯತ ಬಳಿಯಿರಿಸಿದ್ದು, ಅನೇಕರು ಅಂತಿಮ ದರ್ಶನಪಡೆದರು.