ಬೆಳಗಾವಿಯಿಂದ ಭಟ್ಕಳಕ್ಕೆ ಬಂದಿದ್ದ ನಿವೃತ್ತ ಶಿಕ್ಷಕಿಯೊಬ್ಬರು 1.84 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಮರಳಿ ಊರಿಗೆ ಹೋದ ನಂತರ ಚಿನ್ನದ ಜೊತೆ ಹಣವೂ ಕಾಣೆಯಾಗಿದ್ದು ಅವರ ಗಮನಕ್ಕೆ ಬಂದಿದೆ.
Advertisement. Scroll to continue reading.
ಬೆಳಗಾವಿಯ ಆಂಜಿನೇಯ ನಗರದ ಆಸ್ಮಾನಾಭಾನು ಶೇಖ್ ಅವರು ಶಿಕ್ಷಕಿಯಾಗಿದ್ದರು. ಕಳೆದ ವರ್ಷ ನಿವೃತ್ತಿ ಆಗಿದ್ದ ಅವರು ತಮ್ಮ ಉಳಿತಾಯದ ಹಣದಲ್ಲಿ ವಿವಿಧ ಚಿನ್ನಾಭರಣ ಮಾಡಿಸಿಕೊಂಡಿದ್ದರು. ಆ ಆಭರಣಧರಿಸಿ ಅವರು ಭಟ್ಕಳಕ್ಕೆ ಬಂದಿದ್ದು, ಅಕ್ಟೊಬರ್ 6ರಂದು ಸಂಜೆ ಇಲ್ಲಿಂದ ಹೊರಟಿದ್ದರು.
Advertisement. Scroll to continue reading.
ಆ ದಿನ ಸಂಜೆ 4.51ಕ್ಕೆ ಭಟ್ಕಳ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ ಅವರು ರಾತ್ರಿ 11.30ಕ್ಕೆ ಬೆಳಗಾವಿ ತಲುಪಿದರು. ಆ ವೇಳೆ ಅವರ ಕೈಯಲ್ಲಿದ್ದ ಆಭರಣಗಳು ಕಾಣಿಸಲಿಲ್ಲ. ಬ್ಯಾಗ್ ನೋಡಿದಾಗ ಅದಲ್ಲಿದ್ದ ಪರ್ಸ ಹಾಗೂ 3500ರೂ ಹಣವೂ ಕಾಣಿಸಲಿಲ್ಲ. ಆ ಆಭರಣ ಹಾಗೂ ಹಣ ಹುಡುಕಿ ಅವರು ಭಟ್ಕಳಕ್ಕೆ ಮರಳಿದರು. ಆದರೂ, ಅವು ಸಿಗಲಿಲ್ಲ.
Advertisement. Scroll to continue reading.
ಹೀಗಾಗಿ ಭಟ್ಕಳ ಶಹರ ಪೊಲೀಸ್ ಠಾಣೆಗೆ ತೆರಳಿದ ಆಸ್ಮಾನಾಭಾನು ಶೇಖ್ ಅವರು ಕಳ್ಳತನ ನಡೆದ ಬಗ್ಗೆ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ವಿವಿಧ ಆಯಾಮಗಳ ಆಧಾರದಲ್ಲಿ ಕಳ್ಳನ ಹುಡುಕಾಟ ಶುರು ಮಾಡಿದರು.