ಕೆಡಿಸಿಸಿ ಬ್ಯಾಂಕ್ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. 16 ನಿರ್ದೇಶಕ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆ ಪೈಕಿ 7 ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಉಳಿದ ಕ್ಷೇತ್ರಗಳ ಮತ ಎಣಿಕೆ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಅದರ ಭವಿಷ್ಯ ಹೊರಬರಬೇಕಿದೆ.
ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಚುನಾವಣೆಗೆ ಶನಿವಾರ ಮತದಾನ ನಡೆದಿದ್ದು, ಅದೇ ದಿನ ಸಂಜೆ ಉಪವಿಭಾಗಾಧಿಕಾರಿ ಕಾವ್ಯರಾಣಿ ಫಲಿತಾಂಶ ಪ್ರಕಟಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬಣಗಳ ನಡುವೆ ಸ್ಪರ್ಧೆ ನಡೆದಿದ್ದು, ಈವರೆಗಿನ ಫಲಿತಾಂಶದಲ್ಲಿ ಶಿವರಾಮ ಹೆಬ್ಬಾರ್ ಬಣದವರು ಮುನ್ನಡೆ ಸಾಧಿಸಿದ್ದಾರೆ. ಚುನಾವಣೆಗೂ ಮೊದಲು ಮಂಕಾಳು ವೈದ್ಯ ಬಣದಿಂದ ಇಬ್ಬರು ಹಾಗೂ ಹೆಬ್ಬಾರ್ ಬಣದಿಂದ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದವರ ನಡುವೆ ನಡೆದ ಪೈಪೋಟಿಗೆ ಈ ದಿನ ತೆರೆಬಿದ್ದಿದೆ.
ಶಿವರಾಮ ಹೆಬ್ಬಾರ್ ಬಣದಿಂದ ಕುಮಟಾದಲ್ಲಿ ಬಣದ ರಾಜಗೋಪಾಲ ಅಡಿ 9 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ವಿರುದ್ಧ ನಿಂತಿದ್ದ ಗಜಾನನ ಪೈ ಅವರಿಗೆ ಒಂದು ಮತ ಸಹ ಬಿದ್ದಿಲ್ಲ. ಶ್ರೀಧರ ಭಾಗ್ವತ್ 6 ಮತ ಸಿಕ್ಕಿದೆ. ಹಳಿಯಾಳದಲ್ಲಿ ಎಸ್ ಎಲ್ ಘೋಟ್ನೇಕರ್ 9 ಮತಪಡೆದು ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಸುಭಾಸ್ ಕೊರ್ವೇಕರ್ 4 ಮತ ಮಾತ್ರ ಪಡೆದಿದ್ದಾರೆ. ಜೋಯಿಡಾದಿಂದ ಕೃಷ್ಣ ದೇಸಾಯಿ 5 ಮತಪಡೆದು ಗೆದ್ದಿದ್ದಾರೆ. ಅಲ್ಲಿ ಪುರುಷೋತ್ತಮ ಕಾಮತ್ 4 ಮತಪಡೆದು ಸೋಲು ಅನುಭವಿಸಿದ್ದಾರೆ. ಮುಂಡಗೋಡದಿAದ ಎಷ್ ಎಮ್ ನಾಯ್ಕ 8 ಮತ ಪಡೆದು ಗೆದ್ದಿದ್ದು, ಎಲ್ ಟಿ ಪಾಟೀಲ್ 5 ಮತಪಡೆದು ಸೋಲು ಕಂಡಿದ್ದಾರೆ.