ಗೋವಾದಿಂದ ಬೆಂಗಳೂರು ಹೊರಟಿದ್ದ ಬಸ್ಸು ಹಿಡಿದ ಕಾರವಾರ ಪೊಲೀಸರಿಗೆ ಕೋಟಿ ರೂಪಾಯಿ ಸಿಕ್ಕಿದೆ. ಕೋಟಿ ರೂಪಾಯಿಯ ಒಡೆಯರ ಬಗ್ಗೆ ಪೊಲೀಸರು ಹುಡುಕುತ್ತಿದ್ದಾರೆ.
ಸೋಮವಾರ ರಾತ್ರಿ ಗೋವಾದಿಂದ ಖಾಸಗಿ ಬಸ್ಸು ಕಾರವಾರ ಕಡೆ ಹೊರಟಿತು. ಬೆಂಗಳೂರು ಹೋಗಬೇಕಿದ್ದ ಆ ಬಸ್ಸಿನಲ್ಲಿ ಕಲ್ಮೇಶ ಕುಮಾರ ಹಾಗೂ ಬೊಂಬ್ರು ರಾವ್ ಎಂಬಾತರು ಹತ್ತಿದ್ದರು. ಅವರ ಕೈಯಲ್ಲಿದ್ದ ಬ್ಯಾಗಿನಲ್ಲಿ ಒಂದು ಕೋಟಿ ರೂಪಾಯಿ ಹಣವಿದ್ದು, ಈ ವಿಷಯ ಕಾರವಾರ ಡಿವೈಎಸ್ಪಿ ಗಿರೀಶ ಅವರಿಗೆ ಈ ವಿಷಯ ಗೊತ್ತಾಯಿತು. ಮಾಜಾಳಿ ಗಡಿಗೆ ತಮ್ಮ ತಂಡ ಕಳುಹಿಸಿದ ಅವರು ಆ ಬಸ್ಸನ್ನು ಅಲ್ಲಿಯೇ ನಿಲ್ಲಿಸಿದರು.
ಬಸ್ಸಿನ ಒಳಗೆ ಹುಡುಕಿದಾಗ ಅಲ್ಲಿ ಕಂದು ಬಣ್ಣದ ಬ್ಯಾಗ್ ಒಂದು ಕಾಣಿಸಿತು. ಆ ಬ್ಯಾಗಿನ ಒಳಗೆ ಕೋಟಿ ರೂಪಾಯಿ ಕಾಣಿಸಿತು. ಆ ಬ್ಯಾಗು ತಪಾಸಣೆ ಮಾಡಿದಾಗ ನಿರೀಕ್ಷೆಯಂತೆ ಕೋಟಿ ರೂಪಾಯಿ ಕಾಣಿಸಿತು. ಕಲ್ಮೇಶ ಕುಮಾರ ಹಾಗೂ ಬೊಂಬ್ರು ರಾವ್ ಅವರ ಬಳಿ ಪ್ರಶ್ನಿಸಿದಾಗ ಆ ಹಣದ ಬಗ್ಗೆ ಬಾಯ್ಬಿಡಲಿಲ್ಲ.
ಆದರೂ ಪೊಲೀಸರು ಆ ಹಣದ ಮೂಲ ಶೋಧ ನಡೆಸಿದರು. mxon ಎಂಬ ಎಲೆಕ್ಟಿಕ್ ಕಂಪನಿಗೆ ಸೇರಿದ ಹಣ ಇದಾಗಿರುವ ಬಗ್ಗೆ ಶಂಕಿಸಲಾಯಿತು. ತೆರಿಗೆ ತಪ್ಪಿಸಲು ಈ ಹಣವನ್ನು ವಾಮಮಾರ್ಗದಲ್ಲಿ ಸಾಗಿಸುತ್ತಿರುವ ಬಗ್ಗೆ ಅಂದಾಜಿಸಲಾಯಿತು. ಸಿಕ್ಕ ಹಣವನ್ನು ಪೋಲೀಸರು ಆದಾಯ ತೆರಿಗೆ ಇಲಾಖೆಯವರ ಗಮನಕ್ಕೆ ತಂದರು. ಅಲ್ಲಿನ ಅಧಿಕಾರಿಗಳು ಇನ್ನಷ್ಟು ಆಳಕ್ಕೆ ಇಳಿದು ತನಿಖೆ ಶುರು ಮಾಡಿದರು.