ಶಿರಸಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಅನಿಲ ಫರ್ನಾಂಡಿಸ್ ಅವರಿಗೆ ಪ್ರಕಾಶ ಹೆಗಡೆ ಅವರು ಕಮಿಷನ್ ಆಸೆ ತೋರಿಸಿ ಕಾನೂನುಬಾಹಿರ ಕೆಲಸ ಮಾಡಿಸುತ್ತಿದ್ದು, ಪೊಲೀಸರು ಇದನ್ನು ಪತ್ತೆ ಮಾಡಿದ್ದಾರೆ. ಪ್ರಕಾಶ ಹೆಗಡೆ ಅವರ ಮಾತು ಕೇಳಿ ಮಟ್ಕಾ ಆಡಿಸುತ್ತಿದ್ದ ಅನಿಲ ಫರ್ನಾಂಡಿಸ್ ಸಹ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಿರಸಿ ಗಾಂಧೀನಗರ 8ನೇ ಕ್ರಾಸ್ ಅನಿಲ ರೋಜಾರ್ ಫರ್ನಾಂಡಿಸ್ ಅವರು ತಮ್ಮ ಪಾಡಿಗೆ ತಾವಿದ್ದರು. ತಮ್ಮ ಕಿರಾಣಿ ಅಂಗಡಿ ಮೂಲಕ ದಿನಸಿ ಮಾರಾಟ ಮಾಡಿ ಅವರು ಬದುಕು ನಡೆಸುತ್ತಿದ್ದರು. ಶಿರಸಿ ಸಂಪೆಕಟ್ಟುವಿನ ಪ್ರಕಾಶ ಶ್ರೀಪಾದ ಹೆಗಡೆ ಅವರು ಅನೀಲ ಹೆಗಡೆ ಅವರನ್ನು ಒಮ್ಮೆ ಭೇಟಿಯಾದರು. ಕಿರಾಣಿ ವ್ಯಾಪಾರದ ಜೊತೆ ಇನ್ನಷ್ಟು ದುಡಿಯುವ ಆಲೋಚನೆ ಬಗ್ಗೆ ವಿಷಯ ಪ್ರಸ್ತಾಪಿಸಿದರು.
ಪ್ರಕಾಶ ಹೆಗಡೆ ಅವರು ಅನಿಲ ಫರ್ನಾಂಡಿಸ್ ಅವರಿಗೆ ಕುಳಿತಲ್ಲಿಯೇ ದುಡ್ಡು ಮಾಡುವ ಆಸೆ ತೋರಿಸಿದರು. ಅಂಕಿ-ಸAಖ್ಯೆಯ ಆಟ ಆಡಿ ಕಾಸು ಗೆಲ್ಲುವ ಯೋಜನೆ ವಿವರಿಸಿದರು. ಕಾನೂನುಬಾಹಿರವಾಗಿದ್ದರೂ ಮಟ್ಕಾ ಆಡಿಸುವಂತೆ ಅನಿಲ ಫರ್ನಾಂಡಿಸ್ ಅವರನ್ನು ಪ್ರೇರೇಪಿಸಿದರು. ಕಡಿಮೆ ಕೆಲಸದಿಂದ ಹೆಚ್ಚು ಹಣಗಳಿಸುವ ವಿಧಾನ ಅರಿತ ಅನಿಲ ಫರ್ನಾಂಡಿಸ್ ಅವರು ಸಹ ಪ್ರಕಾಶ ಹೆಗಡೆ ಅವರ ಜೊತೆ ಕೈ ಜೋಡಿಸಿದರು.
ಅಕ್ಟೊಬರ್ 14ರಂದು ಅನಿಲ ಫರ್ನಾಂಡಿಸ್ ಅವರು ನಿಲೇಕಣಿ ಸುಬ್ರಹ್ಮಣ್ಯ ರಸ್ತೆ ಕಡೆ ಹೋಗುವ ರಸ್ತೆ ಮೇಲೆ ನಿಂತಿದ್ದರು. ಅಲ್ಲಿ ಬರುವ ಜನರನ್ನು ನಿಲ್ಲಿಸಿ `ಅದೃಷ್ಠದ ಆಟ ಆಡಿ’ ಎಂದು ಹಣಪಡೆಯುತ್ತಿದ್ದರು. ಶಿರಸಿ ನಗರ ಠಾಣೆ ಪಿಎಸ್‌ಐ ನಾಗಪ್ಪ ಅವರು ಇದನ್ನು ಗಮನಿಸಿದರು. ತಮ್ಮ ತಂಡದ ಜೊತೆ ನಾಗಪ್ಪ ಅವರು ಅನಿಲ ಫರ್ನಾಂಡಿಸ್ ಅವರ ಅಕ್ರಮ ಸಂಪಾದನೆಯನ್ನು ತಡೆದರು. ಆ ವೇಳೆ ಸಂಗ್ರಹಿಸಿದ್ದ 700ರೂ ಹಣವನ್ನು ಜಪ್ತು ಮಾಡಿದರು.
ಆಗ, ಅನಿಲ ಫನಾಂಡಿಸ್ ಸತ್ಯ ಬಾಯ್ಬಿಟ್ಟಿದ್ದು `ಇದರಲ್ಲಿ ನನ್ನದೇನೂ ಇಲ್ಲ. ಪ್ರಕಾಶ ಹೆಗಡೆ ಅವರು ಹೇಳಿದಂತೆ ಮಾಡಿದ್ದೇನೆ’ ಎಂದರು. ಮಟ್ಕಾ ಬುಕ್ಕಿ ಪ್ರಕಾಶ ಹೆಗಡೆ ಅವರ ಹೆಸರು ಸೇರಿಸಿ ಅನಿಲ ಫರ್ನಾಂಡಿಸ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.