ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯಲ್ಲಾಪುರದ YTSS ಶಿಕ್ಷಣ ಸಂಸ್ಥೆ ಶ್ರಮಿಸುತ್ತಿದ್ದು, ಅಲ್ಲಿನ ಮಕ್ಕಳು ಸಹ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸದ್ಯ ಶಿರಸಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡಿದ ವೈಟಿಎಸ್‌ಎಸ್ ವಿದ್ಯಾರ್ಥಿನಿಯರು ನಿರ್ಣಾಯಕರ ಮನಗೆದ್ದಿದ್ದಾರೆ.
ADVERTISEMENT
14 ವರ್ಷದ ಒಳಗಿನ ಮಕ್ಕಳಿಗಾಗಿ ಶಿರಸಿಯಲ್ಲಿ ಟೇಬಲ್ ಟೆನ್ನಿಸ್ ಸ್ಪರ್ಧೆ ನಡೆದಿದೆ. ಇದರಲ್ಲಿ ವೈಟಿಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯ ಐವರು ವಿದ್ಯಾರ್ಥಿನಿಯರು ಭಾಗವಹಿಸಿ ಬಹುಮಾನಪಡೆದಿದ್ದಾರೆ. ಇಲ್ಲಿನ ಶರಧಿ ಮೊಗೇರ್, ರೇಣುಕಾ ಶಿರೂರ್, ಅವನಿ ಜಾಧವ, ಅದಿತಿ ಜೋಗಿ, ಅನಿಷಾ ಭಟ್ ಅವರು ತಾಲೂಕಾ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಜಿಲ್ಲಾಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಗೆ ಕಳುಹಿಸಲಾಗಿತ್ತು. ಅಲ್ಲಿಯೂ ಅವರು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆಪಡೆದಿದ್ದಾರೆ.
ADVERTISEMENT
ಸಾಧಕ ಮಕ್ಕಳಿಗೆ ಶುಭಕೋರಿದ ಆಡಳಿತ ಮಂಡಳಿ
ಜಿಲ್ಲಾಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆ ಈ ಐವರ ತಂಡ ಮೊದಲ ಸ್ಥಾನಪಡೆದಿದೆ. ಈ ಎಲ್ಲಾ ಮಕ್ಕಳನ್ನು ಶಿಕ್ಷಕರು ಹಾಗೂ ಪಾಲಕರು ಅಭಿನಂದಿಸಿದ್ದಾರೆ. ಜೊತೆಗೆ `ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ವೈಟಿಎಸ್‌ಎಸ್ ಸಂಸ್ಥೆ ಮಕ್ಕಳು ಬಹುಮಾನ ಗೆದ್ದುಬರಲಿ’ ಎಂದು ಶಾಲಾ ಆಡಳಿತ ಮಂಡಳಿಯವರು ಹಾರೈಸಿದ್ದಾರೆ. `ಶಾಲೆಯಲ್ಲಿ ಮಕ್ಕಳ ಸಾಧನೆಗೆ ಪೂರಕವಾದ ಪ್ರೋತ್ಸಾಹ ದೊರೆಯುತ್ತಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆ ಕ್ರೀಡಾ ಚಟುವಟಿಕೆಗಳಿಗೂ ಒತ್ತು ನೀಡಿದ ಪರಿಣಾಮ ಮಕ್ಕಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ’ ಎಂದು ವೈ ಟಿ ಎಸ್ ಎಸ್‌ನ ಮಾಜಿ ವಿದ್ಯಾರ್ಥಿನಿಯೂ ಆಗಿರುವ ನ್ಯಾಯವಾದಿ ಅಮೀನಾ ಶೇಖ್ ಅವರು ತಿಳಿಸಿದರು.