ಹೊನ್ನಾವರದಲ್ಲಿ ಶಾಲಾ ಬಾಲಕನೊಬ್ಬ ಬೈಕ್ ಓಡಿಸಿದ್ದು, ಇದನ್ನು ಸಹಿಸದ ನ್ಯಾಯಾಲಯ ಬಾಲಕನ ತಂದೆಗೆ 25 ಸಾವಿರ ರೂ ದಂಡ ವಿಧಿಸಿದೆ. ಜೊತೆಗೆ ಒಂದು ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದು, ದಂಡ ಪಾವತಿಸದೇ ಇದ್ದರೆ ಜೈಲು ಶಿಕ್ಷೆ ಪ್ರಮಾಣ ಏರಿಕೆ ಮಾಡುವ ಬಗ್ಗೆಯೂ ನ್ಯಾಯಾಲಯ ಎಚ್ಚರಿಸಿದೆ.
2022ರ ಸೆಪ್ಟಂಬರ್ 9ರಂದು ಹೊನ್ನಾವರ ಪಟ್ಟಣದ ಪ್ರಭಾತನಗರ ರಜತಗಿರಿ ಕ್ರಾಸಿನ ಬಳಿ ಶಾಲಾ ಬಾಲಕನೊಬ್ಬ ಬೈಕ್ ಓಡಿಸಿಕೊಂಡು ಬರುತ್ತಿದ್ದು, ಆತ ಫೋನಿನಲ್ಲಿ ಮಾತನಾಡುತ್ತಲೇ ವೇಗದ ವಾಹನ ಚಾಲನೆ ಮಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದರು. ಬೈಕಿಗೆ ಅಡ್ಡಲಾಗಿ ಪೊಲೀಸರು ಕೈ ಮಾಡಿದ್ದರು. ಬೈಕಿನ ದಾಖಲೆ ಹಾಗೂ ಚಾಲಕನ ದಾಖಲೆ ಪರಿಶೀಲಿಸಿದಾಗ ಬೈಕ್ ಸವಾರನ ಜೊತೆ ಸಹ ಸವಾರನ ಬಳಿಯೂ ಲೈಸೆನ್ಸ ಇರಲಿಲ್ಲ. ಅವರಿಬ್ಬರು ಹೆಲ್ಮೆಟ್ ಸಹ ನೀಡಿರಲಿಲ್ಲ. ಬೈಕಿನ ವಿಮಾ ಅವಧಿ ಸಹ ಮುಗಿದಿದ್ದು, ಈ ಎಲ್ಲಾ ಅಂಶಗಳನ್ನು ಸೇರಿಸಿ ಪೊಲೀಸರು ಪ್ರಕರಣ ದಾಖಲಿಸಿದರು.
ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗ ಬಂದಿತು. ಬೈಕ್ ಮಾಲಕನನ್ನು ಕೋರ್ಟಿನವರು ಕರೆಯಿಸಿದರು. ಮಹಮ್ಮದ್ ಹುಸೇನ ಹಾಜಿಕಾ ಎಂಬಾತರು ಬಾಲಕನಿಗೆ ಬೈಕ್ ನೀಡಿದನ್ನು ಒಪ್ಪಿಕೊಂಡರು.ಇಲ್ಲಿನ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಈರಣ್ಣ ಹುಣಶಿಕಟ್ಟೆ ಅವರು ಈ ಪ್ರಕರಣದ ವಿಚಾರಣೆ ನಡೆಸಿದರು. ಅಪ್ರಾಪ್ತರ ಬೈಕ್ ಚಾಲನೆ ಸಹಿಸದ ನ್ಯಾಯಾಧೀಶರು ತಮ್ಮ ಆದೇಶ ಪ್ರಕಟಿಸಿದರು.
ಒಟ್ಟು 1 ತಿಂಗಳ ಜೈಲುವಾಸ ಹಾಗೂ 25 ಸಾವಿರ ರೂ ದಂಡ ಪಾವತಿಸುವಂತೆ ನ್ಯಾಯಾಧೀಶರು ಆದೇಶ ಹೊರಡಿಸಿದರು. ದಂಡ ತಪ್ಪಿಸಿದರೆ ಇನ್ನಷ್ಟು ದಿನ ಜೈಲು ಶಿಕ್ಷೆಯ ಬಗ್ಗೆಯೂ ಆದೇಶದಲ್ಲಿ ಉಲ್ಲೇಖಿಸಿದರು.