ಮೀನುಗಾರಿಕೆಗೆ ತೆರಳಿದ್ದ ಕಾರವಾರದ ಮೀನುಗಾರ ಅಕ್ಷಯ ಮಾಜಾಳಿಕರ್ ಅವರ ಹೊಟ್ಟೆಗೆ ಮೊನಚಾದ ಮೀನು ಚುಚ್ಚಿದೆ. ವೈದ್ಯಕೀಯ ನೆರವುಪಡೆದರೂ ಅದು ಫಲಕಾರಿಯಾಗದೇ ಅಕ್ಷಯ ಮಾಜಾಳಿಕರ್ ಅವರು ಸಾವನಪ್ಪಿದ್ದಾರೆ.
ಮಾಜಾಳಿ ದಾಂಡೇಭಾಗದಲ್ಲಿ ಅಕ್ಷಯ ಮಾಜಾಳಿಕರ್ (24) ಅವರು ವಾಸವಾಗಿದ್ದರು. ಉತ್ತಮ ಈಜುಗಾರರಾಗಿದ್ದ ಅವರು ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದರು. ಅಕ್ಟೊಬರ್ 14ರಂದು ಅಕ್ಷಯ ಮಾಜಾಳಿಕರ್ (24) ಅವರು ಮೀನುಗಾರಿಕೆಗೆ ಹೋಗಿದ್ದರು. ಆಳ ಸಮುದ್ರ ಪ್ರವೇಶಿಸಿದಾಗ ಅಲ್ಲಿದ್ದ ಕಾಂಡಿ ಮೀನು ದೋಣಿ ಮೇಲ್ಬಾಗದವರೆಗೆ ಹಾರಿತು. ಆ ಮೀನು ಅಕ್ಷಯ ಮಾಜಾಳಿಕರ್ ಅವರ ಹೊಟ್ಟೆಗೆ ಚುಚ್ಚಿತು. 10 ಇಂಚು ಉದ್ದದ ಮೀನು ಚುಚ್ಚಿದ ಪರಿಣಾಮ ಅಕ್ಷಯ ಅವರ ಹೊಟ್ಟೆ ತಳಭಾಗ ಸೀಳು ಬಿದ್ದಿತ್ತು.
ಗಾಯಗೊಂಡ ಅಕ್ಷಯ ಮಾಜಾಳಿಕರ್ ಅವರು ಆಸ್ಪತ್ರೆಗೆ ದಾಖಲಾದರು. ಎರಡು ದಿನಗಳ ಕಾಲ ಅಕ್ಷಯ ಮಾಜಾಳಿಕರ್ ಅವರು ಚಿಕಿತ್ಸೆಪಡೆದಿದ್ದರು. ಕಾರವಾರ ವೈದ್ಯಕೀಯ ವಿಜ್ಞಾನ ಕಾಲೇಜಿನವರು ಅಕ್ಷಂiÀi ಮಾಜಾಳಿಕರ್ ಅವರಿಗೆ ಚಿಕಿತ್ಸೆ ನೀಡಿದ್ದರು. ಚುಚ್ಚಿದ ಗಾಯಕ್ಕೆ ಹೊಲಿಗೆ ಹಾಕಿ ಮನೆಗೆ ಕಳುಹಿಸಿದ್ದರು. . ಆದರೆ, ನೋವು ಕಡಿಮೆ ಆಗದ ಕಾರಣ ಅಕ್ಷಯ ಮಾಜಾಳಿಕರ್ ಅವರು ಮತ್ತೆ ಆಸ್ಪತ್ರೆಗೆ ಮರಳಿದ್ದು, ಗುರುವಾರ ಬೆಳಗ್ಗೆ ಸಾವನಪ್ಪಿದರು. ವೈದ್ಯರು ಸರಿಯಾಗಿ ಚಿಕಿತ್ಸೆಕೊಡದ ಪರಿಣಾಮ ಅಕ್ಷಯ ಮಾಜಾಳಿಕರ್ ಅವರು ಸಾವನಪ್ಪಿದ ಬಗ್ಗೆ ಮೀನುಗಾರರು ದೂರಿದರು.
ವೈದ್ಯರ ವಿರುದ್ಧ ಪ್ರತಿಭಟನೆ
ಮೊನಚಾದ ಮೀನಿನ ಮೂತಿ ಅಕ್ಷಯ ಅವರ ಹೊಟ್ಟೆಯೊಳಗೆ ಹೋಗಿದ್ದು, ಅದೇ ಸಾವಿಗೆ ಕಾರಣ ಎಂಬ ಶಂಕೆವ್ಯಕ್ತವಾಗಿದೆ. ಸೂಕ್ತ ಚಿಕಿತ್ಸೆ ನೀಡದ ಕಾರಣ ಅಕ್ಷಂiÀi ಮಾಜಾಳಿಕರ್ ಸಾವನಪ್ಪಿರುವ ಬಗ್ಗೆ ಮೀನುಗಾರರು ಆಕ್ರೋಶವ್ಯಕ್ತಪಡಿಸಿದ್ದಾರೆ. ಸಾವನಪ್ಪಿದ ಯುವಕನ ಸಂಬAಧಿಕರು ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ. ಕಿಮ್ಸ್ ವೈದ್ಯರ ವಿರುದ್ಧ ನೂರಾರು ಜನ ಪ್ರತಿಭಟನೆ ನಡೆಸಿದ್ದಾರೆ.
ಆಸ್ಪತ್ರೆ ಆವರಣದಲ್ಲಿ ಇದೀಗ `ಬೇಕೇ ಬೇಕು.. ನ್ಯಾಯ ಬೇಕು’ ಎಂಬ ಧ್ವನಿ ಮೊಳಗುತ್ತಿದೆ. `ಸರಿಯಾಗಿ ಚಿಕಿತ್ಸೆ ನೀಡದೇ ಯುವ ಮೀನುಗಾರನ ಸಾವಿಗೆ ಕಾರಣರಾದ ವೈದ್ಯರನ್ನು ಅಮಾನತು ಮಾಡಬೇಕು’ ಎಂದು ಅಲ್ಲಿದ್ದವರು ಆಗ್ರಹಿಸುತ್ತಿದ್ದಾರೆ. `ಇಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದಾದರೆ ಬೇರೆ ಕಡೆ ರವಾನಿಸಬೇಕು. ಸ್ಕಾನ್ ಸಹ ಮಾಡದೇ ಚಿಕಿತ್ಸೆ ನೀಡಲಾಗಿದೆ’ ಎಂದು ಅಕ್ಷಯ ಅವರ ಆಪ್ತರು ಅಸಮಧಾನವ್ಯಕ್ತಪಡಿಸಿದರು.