ಆರೋಗ್ಯ ಶಿಕ್ಷಣದ ಮೂಲಕ ಗುರುತಿಸಿಕೊಂಡಿರುವ ಶಿರಸಿಯ ಅಸ್ಮಿತೆ ಫೌಂಡೇಶನ್ ಅಧಿಕೃತ ಜಾಲತಾಣ ಬಿಡುಗಡೆಯಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೋ ರಮೇಶ ಬಿ ಅವರು ಅದನ್ನು ಲೋಕಾರ್ಪಣೆ ಮಾಡಿದ್ದಾರೆ.
`ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಅಸ್ಮಿತೆ ಪೌಂಡೇಶನ್ ಕಾರ್ಯ ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ. ಪಾರದರ್ಶಕ ಕೆಲಸವನ್ನು ಜನರಿಗೆ ತಲುಪಿಸಲು ಸಂಸ್ಥೆಯ ಜಾಲತಾಣ ಸಿದ್ಧವಾಗಿದ್ದು, ಈ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಬೆಳಗಲಿ’ ಎಂದು ಪ್ರೋ ರಮೇಶ ಬಿ ಅವರು ಹಾರೈಸಿದರು.
`ಡಾ ರಿಯಾಜ್ ಸಾಗರ್ ಮತ್ತು ಅವರ ತಂಡದವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ’ ಎಂದು ಅವರು ಹೇಳಿದರು. ಅಸ್ಮಿತೆ ಫೌಂಡೇಷನ್ ಕಾರ್ಯನಿರ್ವಾಹಕ ನಿರ್ದೇಶಕ ಡಾ ರಿಯಾಜ್ ಸಾಗರ್ ಅವರು ಮಾತನಾಡಿ `ವೆಬ್‌ಸೈಟ್ ಮೂಲಕ ಸಂಸ್ಥೆಯ ಕಾರ್ಯ ಇನ್ನಷ್ಟು ವಿಸ್ತರಣೆ ಆಗಲಿದೆ. ಸಮಾಜಮುಖಿ ಚಟುವಟಿಕೆಗಳ ವ್ಯಾಪ್ತಿಯೂ ದೊಡ್ಡದಾಗಲಿದೆ’ ಎಂದು ವಿವರಿಸಿದರು. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಯುಟಿ ಫರ್ಝಾನಾ ಅಶ್ರಫ್, ಅಸ್ಮಿತೆ ಫೌಂಡೇಷನ್ ನಿರ್ದೇಶಕ ಡಾ ಸಚ್ಚಿನ್ ಬಿ ಎಸ್, ಸಲಹಾ ಸಮಿತಿ ನಿರ್ದೇಶಕ ಡಾ ಕುಮಾರಸ್ವಾಮಿ ಸಿ, ಮತ್ತು ಉಪನ್ಯಾಸಕ ಡಾ ರಾಜಶೇಖರ್ ಅವರು ವೆಬ್‌ಸೈಟ್ ಗಮನಿಸಿದರು.
ಭವಿಷ್ಯದ ಗುರಿ ಹಾಗೂ ಸಾಧನೆ ಬಗ್ಗೆ ಸಂಸ್ಥೆಯ ಪ್ರಮುಖರು ಮಾಹಿತಿ ಹಂಚಿಕೊAಡರು. ಈ ವೆಬ್‌ಸೈಟ್ ಮೂಲಕ ಸಂಸ್ಥೆಯ ಯೋಜನೆಗಳು, ಸಂಶೋಧನಾ ಕಾರ್ಯಗಳು, ತರಬೇತಿ ಕಾರ್ಯಕ್ರಮಗಳ ಪ್ರಚಾರ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿನ ಚಟುವಟಿಕೆಗಳ ಮಾಹಿತಿಯೂ ಜಾಲತಾಣದಲ್ಲಿ ಸಿಗಲಿದೆ.
ಅಸ್ಮಿತೆ ಪೌಂಡೇಶನ್ ವೆಬ್‌ಸೈಟ್ ನೋಡಲು ಇಲ್ಲಿ ಕ್ಲಿಕ್ಕಿಸಿ: https://asmitefoundation.com/