ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯವಿಲ್ಲದ ಯೋಜನೆಗಳನ್ನು ಅನುಷ್ಠಾನಕ್ಕೆ ಕಿಡಿಕಾರಿರುವ ಸಮಾನ ಮನಸ್ಕರು `ಜನರ ಬೇಡಿಕೆಯಂತೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ’ ಎಂದು ರಕ್ತದ ಮೂಲಕ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
Advertisement. Scroll to continue reading.
`ಮುಂದಿನ ಬಜೆಟ್ನಲ್ಲಿ ಸುಸಜ್ಜಿತ ಆಸ್ಪತ್ರೆ ಘೋಷಣೆ ನಡೆಯಬೇಕು. ಕೂಡಲೇ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕೈಬಿಡಬೇಕು’ ಎಂದು ಹೊನ್ನಾವರದ ಯುವಕರು ಪತ್ರ ಚಳುವಳಿ ಮಾಡಿದ್ದಾರೆ. ಬೇರೆ ಬೇರೆ ತಾಲೂಕಿನವರು ಸಹ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಹೊನ್ನಾವರದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಶರಾವತಿ ಪಂಪ್ ಸ್ಟೋರೇಜ್ ಅನಾಹುತಗಳ ಬಗ್ಗೆ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದ್ದಾರೆ. ತಮ್ಮ ಮನವಿಗೆ ಸರ್ಕಾರ ಸ್ಪಂದಿಸದೇ ಇದ್ದರೆ ದಯಾ ಮರಣ ಕೋರಿ ಪತ್ರ ಬರೆಯುವುದಾಗಿಯೂ ಎಚ್ಚರಿಸಿದ್ದಾರೆ.
7 ಲಕ್ಷ ಪತ್ರಗಳು ಅಂಚೆ ಇಲಾಖೆ ಮೂಲಕ ಮುಖ್ಯಮಂತ್ರಿ ಕಚೇರಿಗೆ ತೆರಳಲು ಸಿದ್ದವಾಗಿದೆ. ರಾಜಕಾರಣಿಗಳು ನೀಡಿದ ಭರವಸೆಗಳು ಈಡೇರಿಲ್ಲ ಎಂಬ ಅಂಶವನ್ನು ಈ ಪತ್ರಗಳ ಮೂಲಕ ವಿವರಿಸಲಾಗಿದೆ. `ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೃಷಿ ಭೂಮಿ ಹೋಗಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈಗಾಗಲೇ ರೈತರಿಗೆ ನೋಟಿಸ್ ನೀಡಲಾಗಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಸ್ಪೋಟಕ ಬಳಕೆ ವಿಷಯದಲ್ಲಿಯೂ ತಪ್ಪು ಮಾಹಿತಿ ನೀಡಿದ ಬಗ್ಗೆ ದೂರಲಾಗಿದೆ.