ಅoಕೋಲಾದಿoದ ಕಾರವಾರ ಕಡೆ ತೆರಳುತ್ತಿದ್ದ ಟೆಂಪೋ ಟಿಪ್ಪರಿಗೆ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋದಲ್ಲಿದ್ದ 12 ಜನ ಗಾಯಗೊಂಡಿದ್ದಾರೆ.
ಸೋಮವಾರ ಅಂಕೋಲಾದಿoದ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ಟೆಂಪೋ ಕಾರವಾರ ಕಡೆ ಚಲಿಸುತ್ತಿತ್ತು. ಮುದುಗಾ ಬಳಿ ಟೆಂಪೋ ಮುಂದೆ ಟಿಪ್ಪರ್ ಚಲಿಸುತ್ತಿದ್ದು, ವೇಗವಾಗಿ ಚಲಿಸಿದ ಟೆಂಪೋ ಆ ಟಿಪ್ಪರಿಗೆ ಡಿಕ್ಕಿಯಾಯಿತು. ಮುದುಗಾ ಬಳಿಯ ಹಂಪಿನಲ್ಲಿ ಟಿಪ್ಪರ್ ಏಕಾಏಕಿ ನಿಧಾನವಾಗಿದನ್ನು ಗಮನಿಸದ ಟೆಂಪೋ ಚಾಲಕ ತಮ್ಮ ವಾಹನವನ್ನು ಗುದ್ದಿದರು. ಈ ವೇಳೆ ಟೆಂಪೋ ಬ್ರೆಕ್ ಸಹ ಕೆಲಸ ಮಾಡಲಿಲ್ಲ. ಹೀಗಾಗಿ ಟೆಂಪೋ ಮುಂಬಾಗ ಜಖಂ ಆಯಿತು.
ಈ ಅಪಘಾತದ ರಭಸಕ್ಕೆ ಟೆಂಪೊದಲ್ಲಿದ್ದ ಪ್ರಯಾಣಿಕರು ಪೆಟ್ಟು ಮಾಡಿಕೊಂಡರು. ಎಲ್ಲರೂ ಟೆಂಪೋದ ಒಳಗೆ ಬಿದ್ದು ಗಾಯಗೊಂಡರು. ಈ ಅವಘಡದಲ್ಲಿ 12 ಪ್ರಯಾಣಿಕರಿಗೆ ನೋವಾಗಿದ್ದು, ರೇಷ್ಮಾ ಎಂಬಾತರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಎಲ್ಲರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದ ಪೊಲೀಸರು ಚಾಲಕರ ಹೇಳಿಕೆಯನ್ನುಪಡೆದಿದ್ದಾರೆ.