ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಆಧಾರ್ ಕಾರ್ಡ ಮಾಡಿಸಿಕೊಳ್ಳುವುದಕ್ಕಾಗಿ ಅಗತ್ಯ ದಾಖಲೆಗಾಗಿ ಅರ್ಜಿ ಸಲ್ಲಿಸಿದರೂ ಅದನ್ನು ಪೂರೈಸದ ಕಾರಣ ಕುಮಟಾದ ಹೊಲನಗದ್ದೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಪ್ರಜ್ಞಾ ನಾಯ್ಕ ಅವರ ವಿರುದ್ಧ ಅಸಮಧಾನವ್ಯಕ್ತವಾಗಿದೆ. ಪಿಡಿಓ ವಿರುದ್ಧ ಜಿಲ್ಲಾ ಪಂಚಾಯತಗೆ ದೂರು ನೀಡಿರುವುದಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವರು ಹೇಳಿದ್ದಾರೆ.
ಕುಮಟಾದ ಸೈದಾನಿ ಮಾಲನ್ ಬಿ ಅವರು ತಮ್ಮ ಪತಿ ಜೊತೆ ಗೋವಾದಲ್ಲಿ ವಾಸವಾಗಿದ್ದರು. ಪತಿ ನಿಧನದ ನಂತರ ಅವರು ತವರು ಮನೆಗೆ ಮರಳಿದ್ದು, ಅವರ ಬಳಿ ಯಾವುದೇ ಸರ್ಕಾರಿ ದಾಖಲೆಗಳಿರಲಿಲ್ಲ. ಹೀಗಾಗಿ ಅವರಿಗೆ ಆಧಾರ್ ಕಾರ್ಡ ಮಾಡಿಸಿಕೊಳ್ಳಲು ವಾಸವ್ಯ ದೃಢೀಕರಣ ನೀಡುವಂತೆ ಅವರು ಹೊಲನಗದ್ದೆ ಗ್ರಾಮ ಪಂಚಾಯತಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಗ್ರಾ ಪಂ ಅಧಿಕಾರಿಗಳು ಕಂದಾಯ ಇಲಾಖೆಯವರನ್ನು ಭೇಟಿ ಮಾಡುವಂತೆ ಹಿಂಬರಹ ನೀಡಿದ ಬಗ್ಗೆ ಅವರು ಆಕ್ಷೇಪಿಸಿದ್ದಾರೆ.
`ಶಾಲಾ ದಾಖಲಾತಿ, ಸಂತ್ರಸ್ತೆಯ ತಾಯಿ ಮರಣ ಪ್ರಮಾಣ ಪತ್ರ, ಪತಿಯ ಮರಣ ಪತ್ರ, ಮನೆ ಕರ ರಸೀದಿ ನೀಡಿದರೂ ಪಿಡಿಓ ಸರಿಯಾಗಿ ಸ್ಪಂದಿಸಿಲ್ಲ. ಕಂದಾಯ ಇಲಾಖೆ ಸಂಪರ್ಕಿಸುವAತೆ ಹಿಂಬರಹ ನೀಡಿ ಸತಾಯಿಸಲಾಗುತ್ತಿದೆ. ಈ ಹಿಂದೆಯೂ ಇಂಥಹುದೇ ಪ್ರಕರಣ ನಡೆದಿದ್ದು, ಇದು ಸರ್ಕಾರದ ನಿಯಮಾವಳಿಗಳಿಗೆ ವಿರುದ್ಧ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಅಧ್ಯಕ್ಷ ಆಗ್ನೆಲ್ ರೋಡಿಗ್ರಸ್ ಹೇಳಿದ್ದಾರೆ.

This will close in 6 seconds
You cannot copy content of this page