ಹುಬ್ಬಳ್ಳಿ – ಅಂಕೋಲಾ ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಂಕೋಲಾ ಕಮ್ಮಾಣಿಯ ನಾಗಪ್ಪ ಸಿದ್ದಿ ಅವರು ಬಸ್ಸಿನ ವೇಗಕ್ಕೆ ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಕೊಡ್ಲಗದ್ದೆ ತಿರುವಿನಲ್ಲಿ ಅವರ ತಲೆ ಬಸ್ಸಿನ ತಲೆಭಾಗಕ್ಕೆ ಬಡಿದಿದೆ.
ಶುಕ್ರವಾರ ಮಧ್ಯಾಹ್ನ 1.30ರ ವೇಳೆಗೆ ಗದಗ ಘಟಕದ ಗದಗ-ಹುಬ್ಬಳ್ಳಿ-ಕಾರವಾರ ಬಸ್ಸು ಯಲ್ಲಾಪುರ ಬಸ್ ನಿಲ್ದಾಣ ಪ್ರವೇಶಿಸಿತು. ಮನೆಗೆ ಹೋಗುವ ಆತುರದಲ್ಲಿದ್ದ ನಾಗಪ್ಪ ಸಿದ್ದಿ ಅವರು ಆ ಬಸ್ಸು ಹತ್ತಿದರು. ಯಲ್ಲಾಪುರದಿಂದ ರಾಮನಗುಳಿಗೆ ತೆರಳಲು ಅವರು ಟಿಕೆಟ್‌ಪಡೆದರು. ಆ ಬಸ್ಸಿನ ತುಂಬ ಪ್ರಯಾಣಿಕರಿದ್ದರು. ಬಸ್ಸಿನ ಕೊನೆಯ ಆಸನಗಳು ಖಾಲಿಯಿದ್ದು ಅಲ್ಲಿ ನಾಗಪ್ಪ ಸಿದ್ದಿ ಅವರು ಅವರು ಆರಾಮಾಗಿ ಕುಳಿತಿದ್ದರು. ಪಟ್ಟಣದಲ್ಲಿ ನಿಧಾನವಾಗಿಯೇ ಚಲಿಸಿದ ಬಸ್ಸು ಮಾಗೋಡು ಕ್ರಾಸ್ ಮುಕ್ತಾಯದ ನಂತರ ವೇಗ ಹೆಚ್ಚಾಯಿತು.
ಅರಬೈಲಿನ ಇಳಿಜಾರು ಪ್ರದೇಶದಲ್ಲಿಯೂ ಬಸ್ಸಿನ ವೇಗ ಕಡಿಮೆ ಆಗಲಿಲ್ಲ. ಅದೇ ವೇಗದಲ್ಲಿ ಮುಂದೆ ಸಾಗಿದ ಎಕ್ಸಪ್ರೆಸ್ ಬಸ್ಸು ಕೊಡ್ಲಗದ್ದೆ ಬಳಿಯ ಹಂಪು ಹಾರಿತು. ಕೊನೆಯ ಸಾಲಿನಲ್ಲಿ ಕೂತಿದ್ದ ನಾಗಪ್ಪ ಸಿದ್ದಿ ಅವರು ಬಸ್ಸಿನೊಳಗೆ ಹಾರಿ ಬಿದ್ದರು. ನಾಗಪ್ಪ ಸಿದ್ದಿ ಅವರ ತಲೆ ಬಸ್ಸಿನ ಮೇಲ್ಬಾಗಕ್ಕೆ ಬಡಿದು ಅವರು ಕೆಳಗೆ ಬಿದ್ದರು. ತಲೆಯಿಂದ ರಕ್ತ ಸುರಿಯಲು ಶುರುವಾಯಿತು. ಕೆಳಗೆ ಬಿದ್ದ ರಭಸಕ್ಕೆ ಮೂಗಿಗೂ ಪೆಟ್ಟಾಗಿತ್ತು.
Advertisement. Scroll to continue reading.
Advertisement. Scroll to continue reading.
Advertisement. Scroll to continue reading.
ಅವಘಡದ ಬಗ್ಗೆ ಅರಿತ ಬಸ್ ಚಾಲಕ-ನಿರ್ವಾಹಕರು ಆಂಬುಲೆನ್ಸಿಗೆ ಫೋನ್ ಮಾಡಿದರು. ಕಮ್ಮಾಣಿಗೆ ಹೋಗಬೇಕಿದ್ದ ನಾಗಪ್ಪ ಸಿದ್ದಿ ಅವರು ಆಂಬುಲೆನ್ಸ ಹತ್ತಿದರು. ಅವರಿಗೆ ರಾಮನಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಲಾಯಿತು. ರಕ್ತದ ಮಡುವಿನಲ್ಲಿದ್ದ ಅವರನ್ನು ಆಂಬುಲೆನ್ಸ ಮೂಲಕ ಅಂಕೋಲಾಗೆ ಸಾಗಿಸಲಾಗಿದ್ದು, ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯಿತು. ಮಧ್ಯಾಹ್ನ ನೇರವಾಗಿ ಮನೆಗೆ ಮರಳಬೇಕಿದ್ದ ನಾಗಪ್ಪ ಸಿದ್ದಿ ಅವರು ಸಾಕಷ್ಟು ಪ್ರಮಾಣದಲ್ಲಿ ನೋವುಂಡರು.
ವೇಗದ ಬಸ್ಸು ಚಾಲನೆ ಪರಿಣಾಮ ನೇರವಾಗಿ ಮನೆಗೆ ಹೋಗುವ ಬದಲು ಅವರು ಅಂಕೋಲಾ ಸುತ್ತಾಟ ನಡೆಸಿ, ಇದೀಗ ಅಂಕೋಲಾದಿAದ ರಾಮನಗುಳಿಗೆ ಮತ್ತೆ ಸರ್ಕಾರಿ ಬಸ್ಸು ಹತ್ತಿ ಟಿಕೆಟ್ ತೆಗೆದರು. `ಬಸ್ಸಿನಲ್ಲಿ ಮನೆಗೆ ಹೋಗುತ್ತಿದ್ದೇನೆ. ಸಂಜೆ ಆಗೋಯ್ತು. ಬಸ್ಸು ಜಂಪು ಹಾರಿದ ಕಾರಣ ಬಾನಗೇಡಿ ಆಗೋಯ್ತು’ ಎಂದು ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ನಾಗಪ್ಪ ಸಿದ್ದಿ ಅವರು ಫೋನ್ ಮೂಲಕ ಪ್ರತಿಕ್ರಿಯಿಸಿದರು.
`ಅತಿವೇಗ ಅಪಘಾತಕ್ಕೆ ಕಾರಣ’