ಶಿರಸಿಯ ರೋಹಿತಾಶ್ವ ನೇತ್ರೇಕರ್ ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಎಲ್ಲಿ ಹುಡುಕಿದರೂ ಅವರು ಸಿಗದ ಕಾರಣ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದಾರೆ.
ಶಿರಸಿಯ ಹುಲೇಕಲ್ ಬಳಿಯ ರೋಹಿತಾಶ್ವ ಶಿವಾನಂದ ನೇತ್ರೇಕರ (31) ಅವರು ಬಿಡ್ಕಿಬೈಲ್ ಬಳಿಯಿರುವ ಅಂಗಡಿಯೊAದರಲ್ಲಿ ಕೆಲಸ ಮಾಡುತ್ತಿದ್ದರು. ನವೆಂಬರ್ 8ರಂದು ಅವರು ಅಂಗಡಿ ಮಾಲಕರಿಂದ 50 ರೂಪಾಯಿ ಬೇಡಿದ್ದು, ಆ ಹಣಪಡೆದು ಅವರು ಕಾಣೆಯಾಗಿದ್ದಾರೆ. ರೋಹಿತಾಶ್ವ ಅವರು ಮನೆಗೆ ಬಾರದ ಕಾರಣ ಅವರ ತಾಯಿ ಕಂಗಾಲಾಗಿದ್ದಾರೆ.
ಕೆಲಸ ಮಾಡುವ ಅಂಗಡಿ, ಊರು-ಕೇರಿ, ಸಂಬAಧಿಕರ ಮನೆ ಜೊತೆ ವಿವಿಧ ಸ್ಥಳಗಳಲ್ಲಿ ರೋಹಿತಾಶ್ವ ನೇತ್ರಕರ್ ಅವರಿಗಾಗಿ ಹುಡುಕಾಟ ನಡೆದಿದೆ. ಆದರೆ, ಅವರು ಎಲ್ಲಿಯೂ ಸಿಗಲಿಲ್ಲ. ರೋಹಿತಾಶ್ವ ನೇತ್ರಕರ್ ಅವರ ಬಗ್ಗೆ ಸುಳಿವು ಗೊತ್ತಾಗಲಿಲ್ಲ. ಹೀಗಾಗಿ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಸಹ ಹುಡುಕಾಟ ಶುರು ಮಾಡಿದ್ದಾರೆ.