ಮದುವೆ ಆದ ಗಂಡನ ವಿರುದ್ಧವೇ ಅತ್ಯಾಚಾರ ಆರೋಪ ಮಾಡಿದ ಮಹಿಳೆಯೊಬ್ಬರು 15 ಲಕ್ಷ ರೂ ಬೇಡಿಕೆಯಿಟ್ಟ ವಿಚಿತ್ರ ವಿದ್ಯಮಾನ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ. ಹಣಕೊಡದ ಕಾರಣ ಮಹಿಳೆ ಅತ್ಯಾಚಾರದ ದೂರು ನೀಡಿದ್ದು, ನಿಸಾರ್ ಸಾಹೇಬ್ ಅವರು 28 ದಿನದ ಜೈಲು ವಾಸ ಮುಗಿಸಿ ಮನೆಗೆ ಮರಳಿದ್ದಾರೆ!
ಭಟ್ಕಳದ ಆಜಾದ್ ನಗರದಲ್ಲಿ ನಿಸಾರ್ ಸಾಹೇಬ್ ಅವರು ವಂಶಪಾರoಪರಿಕವಾಗಿ ಹೋಮಿಯೋಪತಿ ಔಷಧಿ ನೀಡುತ್ತ ಬಂದಿದ್ದಾರೆ. ಕುರಾನ್ ಶಿಕ್ಷಕರಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಅಕ್ಟೊಬರ್ 29ರಂದು ಅವರು ಮುಸ್ಲಿಂ ಸಮುದಾಯದ ಸಂಪ್ರದಾಯದ ಪ್ರಕಾರ ಹೆಬಳೆ ಗಾಂಧೀನಗರದ ಪ್ರಥಿಮಾ (ಹೆಸರು ಬದಲಿಸಿದೆ) ಎಂಬಾತರನ್ನು ಎರಡನೇ ಪತ್ನಿಯನ್ನಾಗಿ ಸ್ವೀಕರಿಸಿದ್ದಾರೆ. ಅದಾದ ನಂತರ ಪ್ರಥಿಮಾ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಆದರೆ, ಪ್ರಥಿಮಾ ಅವರು ಬೆಂಗಳೂರಿಗೆ ಹೋದ ತಕ್ಷಣ `ಸಂಬoಧಿಕರಿಗೆ ಅನಾರೋಗ್ಯ’ ಎಂದು ಹೇಳಿ ಭಟ್ಕಳ ಬಸ್ಸು ಹತ್ತಿದ್ದಾರೆ.
ಭಟ್ಕಳಕ್ಕೆ ಬಂದ ಪ್ರಥಿಮಾ ಅವರು ಹೆಬಳೆಯಲ್ಲಿರುವ ನಿಸಾರ್ ಸಾಹೇಬ್ ಅಕ್ಕನ ಮನೆಯಲ್ಲಿ ವಾಸವಾಗಿದ್ದು, ಅಕ್ಟೊಬರ್ 11ರಂದು ನಿಸಾರ್ ಸಾಹೇಬ್ ಅವರು ಪತ್ನಿ ನೋಡಲು ಊರಿಗೆ ಮರಳಿದರು. ಆ ದಿನ ರಾತ್ರಿ ಪತ್ನಿ ಕರೆದುಕೊಂಡು ಅವರು ಆಲ್ ಮುನಾಲ್ ಲಾಡ್ಜಿಗೆ ಹೋದರು. ಆಗ ಅಲ್ಲಿ ಅನೇಕ ಜನ ಜಮಾಯಿಸಿದ್ದು, `ನಿನ್ನ ಜೊತೆ ಇದ್ದವರು ಯಾರು?’ ಎಂದು ನಿಸಾರ್ ಸಾಹೇಬ್ ಅವರನ್ನು ಪ್ರಶ್ನಿಸಿದರು. ಆಗ, ನಿಸಾರ್ ಸಾಹೇಬ್ ಅವರು `ಆಕೆ ನನ್ನ ಪತ್ನಿ’ ಎಂದರು. ಆದರೆ, ಪ್ರಥಿಮಾ ಅವರು `ನನ್ನನ್ನು ಬಲವಂತವಾಗಿ ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಈ ಮೊದಲು ಬೇರೆ ಬೇರೆ ಕರೆದೊಯ್ದು ರೇಪ್ ಮಾಡಿದ್ದಾರೆ’ ಎಂದು ಕೂಗಾಡಿದರು!
ತಕ್ಷಣ ಪ್ರಥಿಮಾ ಅವರು ನಿಸಾರ್ ಸಾಹೇಬ್ ಅವರ ಮೊಬೈಲ್ ಕಸಿದರು. `15 ಲಕ್ಷ ರೂ ಕೊಟ್ಟು ಸೆಟ್ಲಮೆಂಟ್ ಮಾಡಿಕೋ. ಇಲ್ಲವಾದರೆ ನಿನ್ನ ವಿರುದ್ಧ ರೇಪ್ ಕೇಸ್ ಹಾಕುವೆ’ ಎಂದು ಬೆದರಿಸಿದರು. ಇದಕ್ಕಾಗಿ 15 ದಿನ ಕಾಲಾವಕಾಶ ಕೊಟ್ಟಿದ್ದು, ಸೆಪ್ಟಂಬರ್ 14ರಂದು ಭಟ್ಕಳ ಗ್ರಾಮೀಣ ಠಾಣೆಗೆ ಹೋಗಿ ನಿಸಾರ್ ಸಾಬ್ ವಿರುದ್ಧ ಪ್ರಥಿಮಾ ಅವರು ಅತ್ಯಾಚಾರದ ದೂರು ದಾಖಲಿಸಿದರು. ಪರಿಣಾಮ ನಿಸಾರ್ ಸಾಹೇಬ್ ಅವರು 28 ದಿನಗಳ ಕಾಲ ಜೈಲು ಅನುಭವಿಸಿದರು. ಜಾಮೀನಿನ ಮೇಲೆ ಹೊರಬಂದ ನಿಸಾರ್ ಸಾಹೇಬ್ ಅವರು ತಮಗಾದ ಹನಿಟ್ರಾಪ್ ಅನುಭವವನ್ನು ಬಿಚ್ಚಿಟ್ಟರು. ಅನ್ಯಾಯದ ಬಗ್ಗೆ ಪೊಲೀಸ್ ದೂರು ದಾಖಲಿಸಿ, ವಿಷಯ ವಿವರಿಸಿದರು