RSS ವಿರುದ್ಧ ವಾಟ್ಸಪ್ ಸ್ಟೇಟಸ್ ಹಾಕಿದ್ದ ಮಜಾಫರ್ ಕಾಸಿಂ ರಾಜೆಹುಲಿ ಅವರನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ದ್ವೇಷ ಭಾವನೆ ಹರಡುತ್ತಿದ್ದ ಕಾರಣ ಮುನ್ನಚ್ಚರಿಕಾ ಕ್ರಮವಾಗಿ ಆರೋಪಿ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.
ಬನವಾಸಿಯ ಹೆಬ್ಬುತ್ತಿಯ ಮಜಾಫರ್ ಕಾಸಿಂ ರಾಜೆಹುಲಿ ಅವರು ಜನರಲ್ಲಿ ದ್ವೇಷ ಭಾವನೆ ಮೂಡಿಸುವ ಕೆಲಸ ಮಾಡುತ್ತಿದ್ದರು. ಧರ್ಮ ಧರ್ಮಗಳ ನಡುವೆ ಅಶಾಂತಿ ಸೃಷ್ಠಿಸುವುದಕ್ಕಾಗಿ ಅವರು ವಾಟ್ಸಪ್ ದುರುಪಯೋಗಪಡಿಸಿಕೊಂಡಿದ್ದರು. ಹಿಂದು ಧರ್ಮ ಹಾಗೂ ಆರ್ ಎಸ್ ಎಸ್ ವಿರುದ್ಧ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದರು.
ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಹಾಗೂ ಸಂಘದ ಬಗ್ಗೆ ಕೆಟ್ಟದಾಗಿ ನಿಂದಿಸುವ ಬರಹ ನೋಡಿದವರು ಪೊಲೀಸರ ಗಮನಕ್ಕೆ ತಂದರು. ಕಾನೂನಿನ ಪ್ರಕಾರ ಕಠಿಣ ಕ್ರಮಕ್ಕೆ ಮುಂದಾದ ಬನವಾಸಿ ಪೊಲೀಸರು ಮಜಾಫರ್ ಕಾಸಿಂ ರಾಜೆಹುಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದರು. ನಂತರ ಅವರನ್ನು ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಮಜಾಫರ್ ಕಾಸಿಂ ರಾಜೆಹುಲಿ ಅವರು ವಾಟ್ಸಪ್ ಸ್ಟೇಟಸ್ ಹಾಕಿದ ವಿಷಯವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಜನರ ನಡುವೆ ವೈಮನಸ್ಸು ಮೂಡಿಸುವ ಪ್ರಯತ್ನ ಮಾಡಿದ ಕಾರಣ ಮಜಾಫರ್ ಕಾಸಿಂ ರಾಜೆಹುಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
`ಸತ್ಯವನ್ನು ಮಾತ್ರ ಶೇರ್ ಮಾಡಿ. ನಿಂದನಾರ್ಹ ಸಂದೇಶದ ಬಗ್ಗೆ ದೂರು ಕೊಡಿ’